ಮಾಜಿ ಸಚಿವ ನಾಗೇಂದ್ರ (X minister nagendra), ಬಸನಗೌಡ ದದ್ದಲ್‌ಗೆ (Basana gowda daddal) ಬೆನ್ನಲ್ಲೇ ಸಿಎಂ (Cm) ಅಧೀನದಲ್ಲಿರುವ ಹಣಕಾಸು ಇಲಾಖೆಗೂ ಇ.ಡಿ (ED) ಶಾಕ್ ನೀಡಲಿದೆ ಎನ್ನಲಾಗ್ತಿದೆ. ನಿಗಮಕ್ಕೆ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಬಳಿಕ ಹಗರಣ ನಡೆದಿರೋದ್ರಿಂದ ಹಣಕಾಸು ಇಲಾಖೆಗೂ ಇ.ಡಿ ತನಿಖೆಯ ಬಿಸಿ ತಟ್ಟುವ ಸಾಧ್ಯತೆಯಿದೆ.
ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (cm siddaramaiah) ಅಧೀನದಲ್ಲಿರುವ ಹಣಕಾಸು ಇಲಾಖೆ ಪಾತ್ರ ಇರೋದ್ರ ಬಗ್ಗೆ ಯಾವುದೇ ಪ್ರಮುಖ ಸಾಕ್ಷಿಗಳಿಲ್ಲ. ಆದ್ರೆ ಇ.ಡಿ ಅಧಿಕಾರಿಗಳು ಹಣಕಾಸು ಇಲಾಖೆಯತ್ತ ದೃಷ್ಟಿ ಹಾಯಿಸ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಹಣಕಾಸು ಇಲಾಖೆಯಿಂದ ಹಣ ವರ್ಗಾವಣೆಯಾದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಹಣಕಾಸು ಇಲಾಖೆಯಲ್ಲಿ ಅವ್ಯವಹಾರ ಆಗಿದ್ರೆ ಎಸ್‌ಐಟಿ (SIT) ನೋಡಿಕೊಳ್ಳುತ್ತೆ. ಮೂರು ಸಂಸ್ಥೆಗಳು ಈಗಾಗಲೇ ತನಿಖೆ ನಡೆಸ್ತಿವೆ. ತನಿಖೆಯ ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳೋದು. ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸಿ ರಿಪೋರ್ಟ್ ಕೊಡಲಿ. ಆಮೇಲೆ ಕ್ರಮ ತೆಗೆದುಕೊಳ್ತವೆ ಅಂತ ಹೇಳಿದ್ರು.