
ಮುಂಬೈ:ಮನುಷ್ಯನಿಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟವನ್ನು ದೃಢವಾಗಿ ಎದುರಿಸಿ ನಿಂತರೆ ಎಂತಹ ಕಠಿಣ ಸಮಸ್ಯೆಗಳಿಂದಲೂ ಹೊರಬರಬಹುದು. ಹೀಗಿದ್ದರೂ ಕೂಡಾ ಮಾನಸಿಕ ಹಿಂಸೆಯಿಂದಲೋ, ಇನ್ಯಾವುದೋ ಕಾರಣದಿಂದಲೋ ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ನಮ್ಮ ಈ ಸಮಸ್ಯೆಗೆ ಸಾವು ಒಂದೇ ಪರಿಹಾರವೆಂದು ರೈಲು ಬರುತ್ತಿದ್ದಂತೆ ರೈಲ್ವೆ ಹಳಿಗೆ ತಲೆಕೊಟ್ಟು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
भाईंदर रेल्वे स्थानकाजवळ पिता पुत्राने धावत्या लोकल ट्रेनखाली उडी मारून आत्महत्या गेली. सोमवारी सकाळी साडेअकराच्या सुमारास ही घटना घडली. हरिष मेहता (६०) आणि जय मेहता (३०) अशी त्यांची नावे आहेत. त्यांनी आत्महत्या का केली याचा तपास वसई रेल्वे पोलीस करत आहेत. pic.twitter.com/kzXtPPWbHa
— LoksattaLive (@LoksattaLive) July 9, 2024
ಮುಂಬೈನ ಪಾಲ್ಘರ್ ಜಿಲ್ಲೆಯ ಭಾಯಂದರ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ರೈಲು ಬರುತ್ತಿದ್ದಂತೆ ತಂದೆ ಮಗ ಇಬ್ಬರು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 09 ರಂದು ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಭಾಯಂದರ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.6 ರ ಮುಂಭಾಗದಲ್ಲಿ ಇರುವಂತಹ ಹಳಿಗೆ ತಲೆಕೊಟ್ಟು ತಂದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದೃಶ್ಯ ಅಲ್ಲೇ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.