ಕಾಂಗ್ರೆಸ್ ಸರ್ಕಾರದ (Congress government) ಮುಖವಾಡ ಕಳಚಿ ಬಿದ್ದಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY vijayendra) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ (Dk shivakumar) ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಅಂತ ಭರವಸೆ ನೀಡಿದ್ರು. ಆದ್ರೆ ಸರ್ಕಾರ ಬಂದು ಒಂದು ವರ್ಷ ಎರಡು ತಿಂಗಳಾಗಿದೆ.ಕಾಂಗ್ರೆಸ್ ಸರ್ಕಾರದ ನೈಜ ಬಣ್ಣ ಏನು ಅನ್ನೋದು ಜನರಿಗೆ ಗೊತ್ತಾಗ್ತಿದೆ ಅಂತ ವಾಗ್ದಾಳಿ ನಡೆಸಿದ್ದು.

ಇನ್ನೂ ಈ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga gnanendra) ಪ್ರತಿಕ್ರಿಯಿಸಿದ್ದಾರೆ. ಇಲ್ಲಿವರೆಗೂ ಮಂತ್ರಿ ಹಾಗೂ ಅಧ್ಯಕ್ಷರಿಗೆ ಅಧಿಕಾರಿಗಳು ನೊಟೀಸ್ (Notice) ಕೊಟ್ಟಿಲ್ಲ. ಮಂತ್ರಿಗಳ ಕಡೆಯಿಂದ ಸಂದೇಶಹೋಗಿದ್ದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ರಾಜ್ಯ ಸರ್ಕಾರ ಮಾಡಿದೆ ಎಂದ ಅವರು,ಎಸ್ ಐ ಟಿ (SIT) ಮೊದಲು ಚೆನ್ನಾಗಿ ತನಿಖೆ ಮಾಡಿತ್ತು. ಆದ್ರೇ ಇತ್ತಿಚೇಗೆ ಒತ್ತಡಕ್ಕೆ ಒಳಗಾಗಿದ್ರು.ಇದು ಅತ್ಯಂತ ಭ್ರಷ್ಟ ಸರ್ಕಾರ, ದಲಿತರ ಹಣವನ್ನು ಈ ರೀತಿ ಮಾಡಿದ್ದಾರೆ. ಬೇರೆ ಬೇರೆ ನಿಗಮದಲ್ಲೂ ಕೂಡಾ ತನಿಖೆ ಆಗಬೇಕಿದೆ ಅಂತ ಹೇಳಿದ್ರು.
 
			
 
                                 
                                