
‘ಶಿರಡಿಗೆ ಚಲಿಸುವ ರೈಲುಗಳು ಕಮಲನಗರದಲ್ಲಿ ನಿಲ್ಲುವಂತೆ ಮಾಡಲು ತಡೆಯೊಡ್ದುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿತ್ತು. ಆದ್ದರಿಂದ ಲಾಭ, ನಷ್ಟದ ಲೆಕ್ಕಾಚಾರದಲ್ಲಿ ಮತ್ತೆ ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಈ ರೈಲುಗಳನ್ನು ನಿಲ್ಲಿಸಲು ದಕ್ಷಿಣ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ (South central Railway Incharge) ದೂರವಾಣಿ ಮೂಲಕ ತಿಳಿಸಿದ್ದೇನೆ’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ (Bhagavanth Khuba) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಮಲನಗರದಲ್ಲಿ (Kamala Nagar) ಯಾವುದೇ ಕಾರಣಕ್ಕೂ ನಿಲುಗಡೆ ಬಂದ್ ಮಾಡಬಾರದು. ನಮ್ಮ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿ ಒತ್ತಡ ಹಾಕಿದ್ದೇನೆ. ಅದಕ್ಕನುಗುಣವಾಗಿ ರೈಲುಗಳ ನಿಲುಗಡೆಗೆ ಮತ್ತೆ ಅವಕಾಶ ದೊರೆತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ’ ಎಂದು ಅವರು ತಿಳಿಸಿದ್ದಾರೆ.






