ದಿನ ಬೆಳಗಾದರೆ ಕೆಲವರಿಗೆ ಬೆನ್ನು ನೋವು ಸೊಂಟ ನೋವು ಕುತ್ತಿಗೆ ನೋವು ಹೀಗೆ ದೇಹದ ಒಂದೊಂದು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.. ಈ ನೋವುಗಳಿದ್ದರೂ ದೈನಂದಿನ ಕೆಲಸದ ಮೇಲೆ ನಾವು ಗಮನವನ್ನು ವಹಿಸುತ್ತೇವೆ. ಆದರೆ ಕೆಲವರಿಗೆ ಈ ನೋವು ದೀರ್ಘಕಾಲದವರೆಗೂ ಇರುತ್ತದೆ. ಈ ಚಿಕ್ಕ ಪುಟ್ಟ ನೋವುಗಳಿಗೆ ಹೆಚ್ಚಾಗಿ ಜನ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದಿಲ್ಲ.. ಆದರೆ ಕೆಲವರಿಗೆ ಕ್ಯಾಲ್ಸಿಯಂ ಕಡಿಮೆ ಇಂದಾಗಿ ಅಥವಾ ಉರಿಯುತ್ತದ ಲಕ್ಷಣದಿಂದಾಗಿ ಇಂಥ ನೋವುಗಳು ಕಾಣಿಸಿಕೊಳ್ಳುವಂಥದ್ದು ಸಹಜ.. ನಾವು ನಮ್ಮ ದಿನಚರಿಯಲ್ಲಿ ಸೇವಿಸುವ ಆಹಾರದಿಂದಲೂ ಕಡಿಮೆ ಮಾಡಿಕೊಳ್ಳಬಹುದು.
ಶುಂಠಿ
ಆಯುರ್ವೇದದಲ್ಲಿ ಸಾಕಷ್ಟು ಔಷಧಿಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ ಇದರಲ್ಲಿ ಔಷಧಿ ಅಂಶ ಜಾಸ್ತಿ ಇದೆ ,ಹಾಗೂ ನೋವಿನ ಸಂದರ್ಭದಲ್ಲಿ ಶುಂಠಿ ಚಹಾ ,ಅಥವಾ ಸ್ಮುತಿಯಲ್ಲಿ ಶುಂಠಿಯನ್ನು ಅಥವಾ ಅಡುಗೆಯಲ್ಲಿ ಶುಂಠಿಯನ್ನು ಬಳಸಿ ಸೇವಿಸುವುದರಿಂದ ಉರಿಯುತವನ್ನು ಕಡಿಮೆ ಮಾಡುತ್ತದೆ,ಮತ್ತು ನೋವುಗಳನ್ನು ಹೀರಿಕೊಳ್ಳುತ್ತದೆ..
ಬೆಳ್ಳುಳ್ಳಿ
ಇದು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಹಾಗೂ ಬೆಳ್ಳುಳ್ಳಿ ಇದು ನೋವನ್ನು ಕಡಿಮೆ ಮಾಡುತ್ತದೆ ಮುಖ್ಯವಾಗಿ ಕೀಲು ಮತ್ತು ಸ್ನಾಯು ನೋವನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯನ್ನು ಹಸಿಯಾಗಿಯೂ ತಿನ್ನಬಹುದು ಆದರೆ ನಿಮ್ಮ ಆಹಾರದಲ್ಲೂ ಕೂಡ ಬೆಳೆಸಿ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.. ಕೈ ಕಾಲುಗಳು ನೋವಿದ್ದಾಗ ಬೆಳ್ಳುಳ್ಳಿಯನ್ನ ಸಿಪ್ಪೆ ತೆಗೆದು ಜಜ್ಜಿ ಅದರಿಂದ ನೋವಿರುವ ಜಾಗದಲ್ಲಿ ಹಚ್ಚಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿದರೆ ನೋವು ತಕ್ಷಣಕ್ಕೆ ನಿವಾರಣೆ ಆಗುತ್ತದೆ.
ಡ್ರೈ ಫ್ರೂಟ್ಸ್
ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಡ್ರೈ ಫ್ರೂಟ್ಸ್ ನಲ್ಲಿ ಆರೋಗ್ಯಕರ ಕೊಬ್ಬು ಪ್ರೋಟೀನ್ ಹಾಗೂ ಇಮ್ಯೂನಿಟಿ ಪವರ್ ಹೆಚ್ಚಿಸುವಂತಹ ಅಂಶಗಳು, ಪೋಷಕಾಂಶಗಳು ಮಿನರಲ್ಸ್ ಎಲ್ಲ ಕೂಡ ಹೆಚ್ಚಿರುತ್ತದೆ..ಅದರಲ್ಲೂ ಬಾದಾಮಿ ಮತ್ತು ವಾಲ್ನಟ್ ಅನ್ನು ನೀರಿನಲ್ಲಿ ನೆನೆಸಿ ನಂತರ ಸೇವಿಸುವುದರಿಂದ..ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಉತ್ತಮ..