
ಮುಡಾ ಬಹುಕೋಟಿ ಹಗರಣ ಸಾಕಷ್ಟು ಸದ್ದು ಮಾಡುತ್ತಿದೆ. ಈ ಸಂಬಂಧ ಸಿಎಂ ಪುತ್ರ ಯತೀಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೈಸೂರಲ್ಲಿ ಮಾತಾಡಿದ ಅವ್ರು,
ನನಗೂ ಅದಕ್ಕೂ ಸಂಬಂಧವಿಲ್ಲ.ಈಗಾಗಲೇ ಮಂತ್ರಿಗಳು ಬಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಹಗರಣದ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆಮುಡಾ ಕಮಿಷನರ್ ಬದಲಾವಣೆ ಮಾಡ್ತೀನಿ ಅಂದಿದ್ದಾರೆ.ಸುಮ್ಮನೆ ಆರೋಪ ಮಾಡೋದು ಅವರ ಇಮೇಜ್ ಡ್ಯಾಮೇಜ್ ಮಾಡೋಕೆ ಮಾಡೋದು ನೀಚ ಕೆಲ್ಸ. ವಿಶ್ವನಾಥ್ ಯಾವ ಡಾಕ್ಯುಮೆಂಟ್ ಬೇಕು ತೆಗೆದುಕೊಳ್ಳಲಿ.ಅವ್ರು ಕೂಡ ಮುಡಾ ಮೆಂಬರ್ ಇದ್ದಾರೆ.ಈ ಹಗರಣರ ಹೆಚ್ಚು ಬಿಜೆಪಿ ಕಾಲದಲ್ಲೇ ಆಗಿದೆ.ಏನೇನು ಮಾಹಿತಿ ಹೊರಗಡೆ ಬರತ್ತೆ ಬರಲಿ ಜನನೇ ತೀರ್ಮಾನ ಮಾಡ್ತಾರೆ.ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಅಂತ ಯತೀಂದ್ರ ಹೇಳಿದ್ರು.