![](https://pratidhvani.com/wp-content/uploads/2024/07/ARUN-KATER.jpg)
![](https://pratidhvani.com/wp-content/uploads/2024/07/WhatsApp-Image-2024-07-01-at-10.48.21-PM-2-1-791x1024.jpeg)
ರೀಲ್ಸ್ ಮಾಡೋರಿಗೆ ಕಾನೂನು, ಪೊಲೀಸ್ ಇದ್ಯಾವುದೂ ಲೆಕ್ಕಕ್ಕೇ ಇಲ್ಲ ಎನ್ನುವಂತಾಗಿದೆ. ರೀಲ್ಸ್ ಮಾಡೋದು, ವೀವ್ಸ್ ಪಡೆಯೋದು, ಜಾಲತಾಣದಿಂದ ಹಣ ಗಳಿಸೋದು ಅಷ್ಟೆ ಇಂಪಾರ್ಟೆಂಟ್. ರೀಲ್ಸ್ನಲ್ಲಿ ಇವನ ಶೋಕಿ ನೋಡಿದೋರು ಒಂದು ಕ್ಷಣ ದಂಗಾಗ್ತಿದ್ರು. ಯಾಕಂದ್ರೆ ಈತನ ಮೈಮೇಲಿರುವ ಚಿನ್ನ, ಓಡಾಡೋ ಕಾರುಗಳನ್ನ ನೋಡಿದ್ರೆ ಯಾವುದೋ ದೊಡ್ಡ ಕುಳ ಅನಿಸುತ್ತೆ. ಆದ್ರೆ ಈ ಶೋಕಿ ಕುಳ ಪೊಲೀಸರ ಅತಿಥಿ ಆಗಿರೋದು ರೀಲ್ಸ್ ವೀವರ್ಸ್ಗೆ ಶಾಕ್ ಆಗಿದೆ.
![](https://pratidhvani.com/wp-content/uploads/2024/07/WhatsApp-Image-2024-07-01-at-10.48.19-PM-791x1024.jpeg)
ಈತನ ಹೆಸರು ಅರುಣ್ ಕಟಾರೆ. ಮೂಲತಃ ಚಿತ್ರದುರ್ಗ ನಿವಾಸಿ.. ಈತನಿಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕೂಡ ಚೆನ್ನಾಗಿದ್ದಾರೆ. ವೀವರ್ಸ್ ಸೆಳೆಯೋಕೆ ಅಂತಾನೇ ಈತ, ಗನ್ ಮ್ಯಾನ್, ಪಾಶ್ ಕಾರುಗಳು, ಬಾಡಿಗಾರ್ಡ್ಸ್ ವಿತ್ ವೆಪನ್ ಇಟ್ಕೊಂಡು ರೀಲ್ಸ್ ಮಾಡ್ತಿದ್ದ. ಅದ್ರಂತೆ ಕೆಲ ದಿನಗಳ ಹಿಂದೆ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್ ಮಾಡಿದ್ದ.
![](https://pratidhvani.com/wp-content/uploads/2024/07/WhatsApp-Image-2024-07-01-at-10.48.21-PM-1-791x1024.jpeg)
ಈತನ ಬಿಲ್ಡಪ್ ನೋಡಿದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಗನ್ ಹಿಡಿದು ಓಡಾಡ್ತಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ರು. ರೌಡಿ ಚಟುವಟಿಕೆ ಮತ್ತು ಹಳೆಯ ಕೇಸ್ಗಳ ಮೇಲೆ ನಿಗಾ ವಹಿಸುತ್ತಿದ್ದ ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್ನಲ್ಲಿ ಅರುಣ್ ಕಟಾರೆಯನ್ನು ಬಂಧನ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಈತನ ಮೈಮೇಲೆ ಇರೋದು ಅಸಲಿ ಗೋಲ್ಡ್ ಅಲ್ಲ ರೋಲ್ಡ್ ಗೋಲ್ಡ್ ಅನ್ನೋದು ಗೊತ್ತಾಗಿದೆ. ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡ್ಕೊಂಡು ರೀಲ್ಸ್ ಮಾಡ್ತಿದ್ದ ಈತ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡ್ತಿದ್ದ. ಅದ್ರಿಂದ ಬಂದ ಹಣದಲ್ಲಿ ಹುಡುಗರನ್ನು ಮೆಂಟೇನ್ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ.
![](https://pratidhvani.com/wp-content/uploads/2024/07/WhatsApp-Image-2024-07-01-at-10.48.21-PM-2-791x1024.jpeg)
ಒಂದು ಕಡೆ ರೀಲ್ಸ್ ಹುಚ್ಚಾದ್ರೆ ಮತ್ತೊಂದು ಕಡೆ ರಾಬರಿ ಮಾಡೋದ್ರಲ್ಲೂ ಈತ ಎಕ್ಸ್ಪರ್ಟ್ ಅನ್ನೋದು ಖಾಕಿಗೆ ಸುಳಿವು ಸಿಕ್ಕಿದೆ. ಚಿತ್ರದುರ್ಗದಲ್ಲಿ SSLC ಹುಡುಗನನ್ನ ಬೆದರಿಸಿ, ಬಲವಂತವಾಗಿ ಸಿಗರೇಟ್, ಡ್ರಿಂಕ್ಸ್ ಮಾಡಿಸಿ ಫೋಟೋ ತೆಗೆದು ಬರೋಬ್ಬರಿ 35 ಲಕ್ಷ ಮೌಲ್ಯದ 656 ಗ್ರಾಂ ಚಿನ್ನಭರಣ ಸುಲಿಗೆ ಮಾಡಿದ್ನಂತೆ. ಈ ಸಂಬಂಧ 2023ರಲ್ಲಿ ಚಿತ್ರದುರ್ಗ ನಗರ ಠಾಣೆ ಪೊಲೀಸರು ಅರುನ್ನನ್ನ ಬಂಧಿಸಿದ್ರು. ಜಾಮೀನು ಮೇಲೆ ಹೊರಬಂದಿದ್ದ ಈತ ಪರಿಚಯಸ್ಥರ ಬಳಿ 3.5 ಲಕ್ಷ ಸಾಲ ಪಡೆದು ವಂಚಿಸಿದ ಬಗ್ಗೆಯೂ ಕೇಸ್ ದಾಖಲಾಗಿತ್ತು.
![](https://pratidhvani.com/wp-content/uploads/2024/07/WhatsApp-Image-2024-07-01-at-10.48.20-PM-1-791x1024.jpeg)