ತ್ವಚೆಯ ಬಗ್ಗೆ ಎಷ್ಟೇ ಕಾಳಜಿ ವಹಿಸಿದ್ರು ಕಡಿಮೇನೆ..ಸುಂದರವಾಗಿ ಕಾಣ್ಬೇಕು,ನಮ್ಮ ತ್ವಜೆಯ ಹೊಳಪು ಹೆಚ್ಚಾಗಬೇಕು,ಸುಕ್ಕುಗಟ್ಟುವುದನ್ನು ತಡಿಬೇಕು ಅಂದ್ರೆ ಕೆಲವು ನಿಯಮಗಳನ್ನು ಪಾಲಿಸುವುದು ಉತ್ತಮ..ಹಗಲು ರಾತ್ರೀ ಸ್ಕಿನ್ ಕೇರ್ ಮಾಡುದರಿಂದ ಮಾತ್ರ ನಿಮ್ಮ ತ್ವಜೆಯನ್ನು ಅದ್ಭುತವಾಗಿ ಇಟ್ಟುಕೊಳ್ಳಲು ಸಾದ್ಯ..ರಾತ್ರಿ ಟೈಮ್ ನಲ್ಲಿ ನಮ್ಮ ತ್ವಜೆಗು ವಿಶ್ರಾಂತಿ ಸಿಗುತ್ತದೆ.. ಅದಕ್ಕಾಗಿ ರಾತ್ರಿ ಕೆಲವು ಚರ್ಮದ ಆರೈಕೆಗೆ ಅಳವಡಿಸಿಕೊಂಡರೆ ಸೌಂದರ್ಯದ ಹಾನಿ ಆಗುವುದನ್ನು ತಪ್ಪಿಸಬಹುದು.
![](https://pratidhvani.com/wp-content/uploads/2024/06/IMG_8566.jpeg)
ಮೇಕಪ್ ರಿಮೂವ್ ಮಾಡ್ಬೇಕು
ಸಾಕಷ್ಟು ಜನಕ್ಕೆ ಮೇಕಪ್ ಮಾಡಿಕೊಳ್ಳುವುದು ತುಂಬಾನೆ ಇಷ್ಟ.ಆದ್ರೆ ಅದನ್ನ ರಿಮೂವ್ ಮಾಡುವುದು ಕಷ್ಟ ಅನ್ನೋದಕ್ಕಿಂತ ಉದಾಸೀನ.ಆದ್ರೆ ಹೊರಗಡೆ ಅಲ್ಲಿ ಇಲ್ಲಿ ಸುತ್ತಾಡಿ ನೀವು ಎಷ್ಟೇ ದಣಿದಿದ್ದರೂ ಮನೆಗೆ ಬಂದ ಮೇಲೆ ನಿಮ್ಮ ಮೇಕಪ್ನೊಂದಿಗೆ ಮಾತ್ರ ಎಂದಿಗೂ ಮಲಗಬೇಡಿ..ಇದು ನಿಮ್ಮ ತ್ವಜೆಯ ಹೊಳಪನ್ನು ಹಾಗೂ ಸ್ಕಿನ್ ಟೋನ್ ನ ಹಾಳು ಮಾಡುತ್ತದೆ..
![](https://pratidhvani.com/wp-content/uploads/2024/06/IMG_8568.jpeg)
ಉಗುರು ಬೆಚ್ಚ ನೀರಿಂದ ಮುಖ ತೊಳೆಯಿರಿ
ಬೆಚ್ಚಗಿನ ನೀರಿಂದ ಮುಖ ತೊಳೆಯುದರಿಂದ ಮುಖದಲ್ಲಿರುವ.ಕೊಳೆ,ಡಸ್ಟ್ ಅಥವಾ ಬ್ಯಾಕ್ಟೀರಿಯ ಶಮನವಾಗುತ್ತದೆ..ಹಾಗೂ ನಿಮ್ಮ ತ್ವಜೆ ಸಲೀಸಾಗಿ ಗಾಳಿ ತೆಗೆದುಕೊಳ್ಳಲು ಸಹಾಯವಾಗುತ್ತದೆ.
![](https://pratidhvani.com/wp-content/uploads/2024/06/IMG_8569.jpeg)
ನೈಟ್ ಕ್ರೀಮ್ ಬಳಸಿ
ನೈಟ್ ಕ್ರೀಮ್ ತ್ವಜೆಯ ಆರೈಕೆಗೆ ತುಂಬಾನೆ ಒಳ್ಳೆಯದು.ನೈಟ್ ಕ್ರೀಮ್ ಬಳಸುವುದರಿಂದ ಸ್ಕಿನ್ ನ ಮೊಯಿಶ್ಚರೈಸ್ ಮಾಡುತ್ತದೆ.. ಫೇಸ್ ಸೀರಮ್ ತೇವಾಂಶವನ್ನು ಒದಗಿಸಿದರೆ, ಫೇಸ್ ಕ್ರೀಮ್ ತೇವಾಂಶವನ್ನು ಲಾಕ್ ಮಾಡುತ್ತದೆ.
![](https://pratidhvani.com/wp-content/uploads/2024/06/IMG_8567.webp)
ಹೆಚ್ಚು ನೀರು ಸೇವಿಸಿ
ಚರ್ಮದ ಆರೈಕೆಯಲ್ಲಿ ನೀರಿನ ಪಾತ್ರ ಬಹಳ ದೊಡ್ಡದು. ದೇಹವನ್ನು ಹೈಡ್ರೇಟ್ ಮಾಡಿದಷ್ಟೂ ತ್ವಜೆಯ ಹೊಳಪು ಹೆಚ್ಚುತ್ತದೆ..ಹೆಚ್ಚು ಹೆಚ್ಚು ನೀರಿನ ಸೇವನೆ ನಮ್ಮ ಅಂದವಲ್ಲದೇ ಆರೋಗ್ಯಕ್ಕೆ ಒಳ್ಳೆಯದು. ಮೊಡವೆ ಮತ್ತು ಕಲೆಗಳ ಸಾಧ್ಯತೆಗಳನ್ನು ತಳ್ಳಿಹಾಕುವುದಲ್ಲದೇ ತ್ವಚೆಯ ಹೊಳಪನ್ನು ಹೆಚ್ಚಿಸಿ ನಮ್ಮನ್ನು ಸುಂದರವಾಗಿಸುತ್ತದೆ.