ಡ್ರೈ ಫ್ರೂಟ್ಸ್ ಗಳನ್ನ ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.ಅದರಲ್ಲಿ ಕೂಡ ಡ್ರೈ ಫ್ರೂಟ್ಸ್ ಅನ್ನು ತಿನ್ನೋದ್ರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೆ ಡ್ರೈ ಫ್ರೂಟ್ಸ್ ಉಂಡೆ,ಮಿಲ್ಕ್ ಶೇಕ್ ಹೇಗೆ ನಾನಾ ಬಗೆಯ ತಿನಿಸು ಮಾಡಿ ಕೊಡ್ತಾರೆ..ಈ ಬಾದಾಮಿ,ದ್ರಾಕ್ಷಿ,ಗೋಡಂಬಿ ,ಉತ್ತುತ್ತೆ,ಅಂಜೂರದಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ಖನಿಜಾಂಶಗಳು ದೊರಕುತ್ತದೆ..ಆದ್ರೆ ಇವುಗಳನ್ನ ನೀರಿನಲ್ಲಿ ನೆನೆಸಿ ನಂತರ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.
ಜೀರ್ಣಕ್ರಿಯೆಗೆ ಉತ್ತಮ
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಡ್ರೈ ನೆನೆಸಿದ ಡ್ರೈ ಫ್ರೂಟ್ಸ್ ಅನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ.. ಡ್ರೈ ಫ್ರೂಟ್ಸ್ ಅನ್ನು ನೆನೆಸುವುದರಿಂದ ಹಣ್ಣುಗಳು ಮೃದುವಾಗುತ್ತದೆ ಹಾಗೂ ದೇಹಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ ಹಾಗೂ ಇದು ಜೀರ್ಣಕಾರಿ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಕರುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಅಂಜೂರ ಮತ್ತು ಬಾದಾಮಿಯಲ್ಲಿ ಕ್ಯಾಲ್ಸಿಯಂ ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಂತ ಪೋಷಕಾಂಶಗಳು ಹೆಚ್ಚಿವೆ. ಈ ಹಣ್ಣುಗಳನ್ನ ನೆನಸಿ ತಿನಿಸುವುದರಿಂದ ದೇಹಕ್ಕೆ ಬೇಕಾದ ನ್ಯೂಟ್ರಿಯೆಂಟ್ಸ್ ಸುಲಭವಾಗಿ ಲಭ್ಯವಾಗುತ್ತದೆ. ಆಸ್ಟಿಯೊಪೊರೋಸಿಸ್ ನ ನಿವಾರಣೆ ಮಾಡುತ್ತದೆ..
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ನೆನೆಸಿದ ಒಣ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ ಅದರಲ್ಲೂ ಒಮೆಗಾ3 ಕೊಬ್ಬಿನಾಮ್ಲಾಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿದ್ದು.ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಕೂಡ ಬಾದಾಮಿ ಮತ್ತು ವಾಲ್ನೆಟ್ ನಂತಹ ಹಣ್ಣುಗಳನ್ನು ನೆನೆಸಿ ಸೇವಿಸುವುದು ಹೃದಯದ ಆರೋಗ್ಯಕ್ಕೆ ಇನ್ನೂ ಒಳ್ಳೆಯದು..
ಇದೆಲ್ಲದರ ಜೊತೆಗೆ ಬ್ಲಡ್ ಶುಗರ್ ಲೆವೆಲನ್ನು ಬ್ಯಾಲೆನ್ಸ್ ಮಾಡುತ್ತದೆ, ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ, ಹಾಗೂ ಉತ್ತಮ ತ್ವಚೆ ನಿಮ್ಮದಾಗುತ್ತದೆ, ಹಾಗೂ ವೈಟ್ ಮ್ಯಾನೇಜ್ಮೆಂಟ್ ಗೆ ಬೆಸ್ಟ್ ರೆಮಿಡಿ ಇದಾಗಿದೆ..