ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ..ಮುಖದಲ್ಲಿ ಚಿಕ್ಕ ಕಲೆಯಾದ್ರೂ ಕೂಡ ತುಂಬಾನೆ ತಲೆ ಕೆಡಿಸಿಕೊಳ್ತಾರೆ.ಆ ಕ್ರೀಮ್ ಈ ಫೇಸ್ ಪ್ಯಾಕ್ ಅಂತ ಕಲೆಯನ್ನು ಶಮನ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ.. ಆದರೆ ಮುಖದ ಮೇಲೆ ಬಂಗು ಬಂದರೆ ಎಂತವರಿಗೂ ಕಿರಿಕಿರಿ ಉಂಟಾಗುವುದು ಸಹಜ ಇದು ಮುಖದ ಅಂದವನ್ನು ಹಾಳು ಮಾಡುತ್ತದೆ..
![](https://pratidhvani.com/wp-content/uploads/2024/06/IMG_8549.jpeg)
ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಾಗ ಈ ಕಲೆಗಳು ಬರುತ್ತವೆ ಕೆನ್ನೆ ಮೂಗಿನ ಮೇಲೆ ಹಾಗೂ ಹಣೆಯ ಮೇಲೆ ಈ ಹೈಪರ್ ಪಿಗ್ಮೆಂಟೇಶನ್ ನನ್ನ ಅಥವಾ ಬಂಗನ್ನ ನೋಡಬಹುದು.. ಹಾರ್ಮೋನ್ ನಲ್ಲಿ ಚೇಂಜಸ್ ಉಂಟಾದಾಗ ಹೇರಿಟಿಯಿಂದಾಗಿ ಹಾಗೂ ಸೂರ್ಯನ ಬಿಸಿಲಿಗೆ ನಮ್ಮ ಚರ್ಮವನ್ನು ಓದಿದಾಗ ಬಂಗುಗಳು ಬರಲು ಕಾರಣವಾಗುತ್ತದೆ.. ಈ ಪಿಗ್ಮೆಂಟೇಶನ್ ನ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನ ಬಳಸಿ ಶಮನ ಮಾಡಬಹುದು..ಆ ಬಗ್ಗೆ ಇಲ್ಲಿದೆ ಡಿಟೇಲ್ಸ್..
![](https://pratidhvani.com/wp-content/uploads/2024/06/IMG_8548.jpeg)
ಗಂಧ
ಗಂಧದ ಪುಡಿಗೆ ಸ್ವಲ್ಪ ರೋಜ್ ವಾಟರ್ ಮತ್ತು ಹಾಲನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ , ಆ ಮಿಶ್ರಣವನ್ನು ಬಂಗು ಆದ ಜಾಗಗಳಿಗೆ ಹಚ್ಚಿ, ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದು ಉತ್ತಮ.. ಗಂಧವು ಬ್ಲಡ್ ನ ಪ್ಯುರಿಫೈ ಮಾಡುತ್ತದೆ..ಹಾಗು ಸ್ಕಿನ್ ಟಾನಿಕ್ ಆಗಿ ಕೂಡ ಕೆಲಸ ಮಾಡುತ್ತದೆ..ಮತ್ತು ಇದು ಸೂರ್ಯನ ಕಿರಣಗಳಿಂದ ತ್ವಜೆಯನ್ನು ರಕ್ಷಿಸುತ್ತದೆ..
![](https://pratidhvani.com/wp-content/uploads/2024/06/IMG_8550.jpeg)
ಬ್ಲಾಕ್ ಟೀ ವಾಟರ್
ಬ್ಲಾಕ್ ಟೀಗೆ ,ಒಂದು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿಂಗರ್ ನ ಹಾಕಿ,ಆ ಮಿಶ್ರಣವನ್ನು ಮುಖದಲ್ಲಿರುವ ಪಿಗ್ಮೆಂಟೇಷನ್ ಆದ ಜಾಗಕ್ಕೆ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಡಾರ್ಕ್ ಸ್ಪಾಟ್ಸ್ ಕಡಿಮೆಯಾಗುತ್ತದೆ..ಸ್ಕಿನ್ ನ ವೈಟ್ ಮಾಡುತ್ತದೇ..
![](https://pratidhvani.com/wp-content/uploads/2024/06/IMG_8551.jpeg)
ಹಾಲು
ಹಾಲನ್ನು ಬಳಸುವುದರಿಂದ ಸ್ಕಿನ್ ಟೋನ್ ನ ಲೈಟ್ ಮಾಡಿತ್ತದೆ..ಕಾರಣ ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಹೆಚ್ಚಿರುತ್ತದೆ..ಒಂದು ಬೌಲ್ ಗೆ ಹಾಲನ್ನು ಹಾಕಿ, ಅದಕ್ಕೆ ಒಂದು ಕಾಟನ್ ನ ಕೆಲ ನಿಮಿಷಗಳ ನೆನೆಸಿಡಿ..ನಂತರ ಮುಖಕ್ಕೆ ಅಪ್ಲೈ ಮಾಡಿ..
![](https://pratidhvani.com/wp-content/uploads/2024/06/IMG_8552.jpeg)