
ರಾಜ್ಯ ಅಗ್ನಿಶಾಮಕ ಇಲಾಖೆ ಡಿಜಿಪಿ ಯಾಗಿದ್ದ ಕಮಲ್ ಪಂತ್, 1990 ಬ್ಯಾಚ್ IPS ಅಧಿಕಾರಿಯಾಗಿ ಆಯ್ಕೆಯಾಗಿದ್ದ ಕಮಲ್ ಪಂತ್.
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಸುಧೀರ್ಘ ಸೇವೆ ಸಲ್ಲಿಸಿದ್ದ ಕಮಲ್ ಪಂತ್, 34 ವರ್ಷಗಳ ಪೊಲೀಸ್ ಸೇವೆಯಿಂದ ಇಂದು ನಿವೃತ್ತಿ.
Msci ಪದವೀಧರರಾಗಿದ್ದ ಕಮಲ್ ಪಂತ್ ಉತ್ತರಾಂಚಲ ಮೂಲದವರು. ಶಿವಮೊಗ್ಗ ASP ಯಾಗಿ ತಮ್ಮ ಸೇವೆ ಆರಂಭಿಸಿದ್ದ ಕಮಲ್ ಪಂತ್, ಲೋಕಾಯುಕ್ತ ಲಂಚ ಹಗರಣದ SIT ಮುಖ್ಯಸ್ಥರಾಗಿದ್ದ ಕಮಲ್ ಪಂತ್, ಬೆಂಗಳೂರು ಜಂಟಿ ಪೊಲೀಸ್ ಕಮಿಷನರ್ ಆಗಿ ಕೂಡ ಸೇವೆ ಸಲ್ಲಿಸಿದ್ದರು.

ಕಮಲ್ ಪಂತ್ ನಿವೃತ್ತಿಯಿಂದ ಪ್ರಣವ್ ಮೊಹಂತಿ DGP ಯಾಗಿ ಬಡ್ತಿ, ನಿವೃತ್ತಿ ಹಿನ್ನೆಲೆ ಹಿರಿಯ ಅಧಿಕಾರಿಗಳು ಭಾಗಿ, ಡಿಜಿಐಜಿಪಿ ಅಲೋಕ್ ಮೋಹನ್, ಸಂದೀಪ್ ಪಾಟೀಲ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗಿ





