ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ದೇಹ ಹಾಗೂ ಸೌಂದರ್ಯ ಕೂಡ ಕುಗ್ಗಲು ಆರಂಭಿಸುತ್ತದೆ .ಮುಖ್ಯವಾಗಿ ವಯಸ್ಸಾಗುವಿಕೆ ನಮ್ಮ ಚರ್ಮದಲ್ಲಿ ಕಾಣಿಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ,ನೆರೆಗೆ ಹಾಗು ಗೆರೆ ಹೆಚ್ಚಾಗುತ್ತದೆ ಹಾಗೂ ಚರ್ಮ ಜೋತು ಬೀಳುತ್ತದೆ..
ಆದ್ರೆ ಹೆಚ್ಚು ಜನಕ್ಕೆ ಚಿಕ್ಕವಯಸ್ಸಿನಲ್ಲಿ ಚರ್ಮ ಸುಕ್ಕುಗಟ್ಟುತ್ತದೆ,ಕಣ್ಣಿನ ಬಳಿ ವ್ರಿಂಕಲ್ಸ್ ಬರುತ್ತದ..ಇದಕ್ಕೆ ಪ್ರಮುಖ ಕಾರಣ ಅತಿಹೆಚ್ಚು ಮೇಕಪ್ ಮಾಡುವುದು,ರಾಸಾಯನಿಕ ಹೆಚ್ಚಿರುವ ಕ್ರೀಮ್ಗಳನ್ನು ಬಳಸದರಿಂದ..ಚರ್ಮ ಸುಕ್ಕಾಗುವುದನ್ನ ತಡೆಯಲು ಈ ಮದ್ದನ್ನು ಬಳಸಿ..
ಎಗ್ ವೈಟ್
ಮುಖಕ್ಕೆ ಎಗ್ ವೈಟ್ ಅನ್ನ ಅಪ್ಲೈ ಮಾಡುವುದರಿಂದ ಇದರಲ್ಲಿ ಇರುವಂತಹ ವಿಟಮಿನ್ ಎ ನಿಮ್ಮ ಡಾರ್ಕ್ ಸ್ಪಾಟ್ಸ್ ಅನ್ನ ಕಡಿಮೆ ಮಾಡಿ ಮುಖ ಹೊಳೆಯುವಂತೆ ಮಾಡುತ್ತದೆ. ಹಾಗೂ ವಿಟಮಿನ್ ಬಿ ಅಂಶ ಹೆಚ್ಚಿರುವುದರಿಂದ ಏಜಿಂಗ್ ಪ್ರಾಬ್ಲಮ್ ಅನ್ನ ಕಡಿಮೆ ಮಾಡುತ್ತದೆ ಹಾಗೂ ಪೋಟಾಸಿಯಂ ಇದರಲ್ಲಿ ಇರುವುದರಿಂದ ನಿಮ್ಮ ಸ್ಕಿನ್ ಅನ್ನ ಟೈಟ್ ಮಾಡಿ ಫ್ರೆಶ್ ಅಂಡ್ ನ್ಯಾಚುರಲ್ ಲುಕ್ ನೀಡುತ್ತದೆ.
ದಾಲ್ಚಿನ್ನಿ ಮತ್ತು ಜೇನುತುಪ್ಪ
ಮನೆಯಲ್ಲಿ ಮಸಾಲ ಡಬ್ಬವನ್ನು ಓಪನ್ ಮಾಡಿದ್ರೆ ನಿಮಗೆ ದಾಲ್ಚಿನ್ನಿ ದೊರಕುತ್ತದೆ ,ಅದನ್ನ ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನ ಹಾಕಿ ಪ್ರತಿದಿನ ಮುಖಕ್ಕೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಮುಖವನ್ನ ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಹೊಳೆಯುವ ತೊಜೆ ನಿಮ್ಮದಾಗುತ್ತದೆ ಹಾಗೂ ಮುಖದಲ್ಲಿ ಮೂಡಿರುವ ವ್ರಿಂಕಲ್ಸ್ ಕಡಿಮೆಯಾಗುತ್ತದೆ.
ಅರ್ಗಾನ್ ಆಯಿಲ್
ಆರ್ಗನ್ ಆಯಿಲ್ ನಲ್ಲಿಫ್ಯಾಟಿ ಆಸಿಡ್, ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಅಂಶ ಹೆಚ್ಚಿರುವುದರಿಂದ ನಮ್ಮ ತ್ವಚೆಗೆ ತುಂಬಾನೇ ಒಳ್ಳೆಯದು. ನಮ್ಮ ಸ್ಕಿನ್ ಅನ್ನ ಇಂಪ್ರೂ ಮಾಡುತ್ತೆ ಹಾಗೂ ವ್ರಿಂಕಲ್ಸ್ ಮಾಡೋದಕ್ಕೆ ತುಂಬಾನೇ ಸಹಾಯಕಾರಿ.