ಮಳೆಗಾಲ ಬಂತು ಅಂದ್ರೆ ಶೀತ ನೆಗಡಿ, ಕೆಮ್ಮು ಜ್ವರ ಇದೆಲ್ಲಾ ಕಾಮನ್ .. ಆದರೆ ಇದೆಲ್ಲದರ ನಡುವೆ ಹೆಚ್ಚು ಜನಕ್ಕೆ ಕಾಡ್ತಾ ಇರುವಂತ ಒಂದು ಕಾಯಿಲೆ ಅಥವಾ ಜ್ವರ ಅಂದ್ರೆ ಡೆಂಗ್ಯೂ..ಕೆಲವರು ಯಾವುದೆ ಜ್ವರ ಬಂದ್ರು ಡೆಂಗ್ಯೂ ಅಂದುಕೊಳ್ತಾರೆ..ಆದ್ರೆ ಸರಿಯಾಗಿ ಪರೀಕ್ಷಿಸಿ ಅದು ಡೆಂಗ್ಯೂನ ಅಥವಾ ಬರಿ ಜ್ವರನ ಅಂತ ಪತ್ತೆ ಹಚ್ಚುವುದು ಉತ್ತಮ.. ಡೆಂಗ್ಯೂ ಬಂದಾಗ ಜನರು ತಮ್ಮ ಆಹಾರ ಪದ್ಧತಿ ಹಾಗೂ ಲೈಫ್ ಸ್ಟೈಲ್ ಬಗ್ಗೆಯೂ ತುಂಬಾನೇ ಕಾಳಜಿ ವಹಿಸಿಕೊಳ್ಳಬೇಕು.. ಡೆಂಗ್ಯೂದಿಂದ ಜನರು ತುಂಬಾನೆ ಕುಗ್ಗಿ ಹೋಗ್ತಾರೆ ವೀಕ್ ಆಗ್ತಾರೆ..ಇಂತಹಾ ಟೈಮ್ನಲ್ಲಿ ಈ ಹಣ್ಣುಗಳು ಹಾಗೂ ಜ್ಯೂಸ್ ನ ಸೇವಿಯುವುದರಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ..
ದಾಳಿಂಬೆ
ದಾಳಿಂಬೆ ಹಣ್ಣನ್ನ ಸೇವಿಸುವುದರಿಂದ ಲೋಕ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಗುಣಲಕ್ಷಣಗಳು ಡೆಂಗ್ಯೂ ಜ್ವರದ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ ಹಾಗೂ ಬ್ಲಡ್ ಸರ್ಕ್ಯುಲೇಷನ್ ತುಂಬಾನೇ ಒಳ್ಳೆಯದು.. ದಾಳಿಂಬೆ ಆದರು ತಿನ್ನಬಹುದು ಇಲ್ಲವಾದಲ್ಲಿ ದಾಳಿಂಬೆಯ ಜ್ಯೂಸನ್ನು ಕುಡಿಯುವುದು ಇನ್ನೂ ಉತ್ತಮ ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ.
ಕಿವಿ
ಡೆಂಗ್ಯೂ ಸಂದರ್ಭದಲ್ಲಿ ನಾವು ನ್ಯೂಟ್ರಿಷನ್ ಹೆಚ್ಚು ಇರುವಂಥ ಹಣ್ಣುಗಳನ್ನು ತಿನ್ನಬೇಕು, ಹಾಗೂ ಕಿವಿ ಫ್ರೂಟಿನಲ್ಲಿ ವಿಟಮಿನ್ ಸಿ ಹಾಗೂ ಪೋಟಾಶಿಯಂ ಅಂಶ ಹೆಚ್ಚಿರುತ್ತದೆ. ಹಾಗೂ ಆಂಟಿ ಆಕ್ಸಿಡೆಂಟ್ ಆದಂತಹ ಗ್ಯಾಲಿಕ್ ಆಸಿಡ್ ಕೂಡ ಜಾಸ್ತಿ ಇರುತ್ತದೆ, ಇದು ದೇಹದಲ್ಲಿ ಇಮ್ಯೂನಿಟಿಯನ್ನು ಬೂಸ್ಟ್ ಮಾಡುತ್ತದೆ.
ಪಪ್ಪಾಯ
ಇದರಲ್ಲಿ ಇನ್ಫ್ಲಮೇಟರಿ ಅಂಶ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ,ನಮ್ಮ ಬಾಡಿಗೆ ಸ್ಟ್ರೆಂತ್ ಅನ್ನು ನೀಡುತ್ತದೆ ಹಾಗೂಇಮ್ಯೂನ್ ಸ್ಟೇಟಸ್ ನ ಹೆಚ್ಚು ಮಾಡುತ್ತದೆ ಮತ್ತು ಡೆಂಗ್ಯೂ ವಿರುದ್ಧ ಹೋರಾಡುವುದಕ್ಕೆ ಸಹಾಯಕಾರಿ ,ಕಾಯಿಲೆಯನ್ನು ಬೇಗನೆ ರಿಕವರಿ ಮಾಡುತ್ತದೆ.
ಇದೆಲ್ಲದರ ಜೊತೆಗೆ ಸಿಟ್ರಿಕ್ ಅಂಶ ಹೆಚ್ಚಿರುವಂತಹ ಹಣ್ಣುಗಳಾದ ಕಿತ್ತಲೆ, ನೆಲ್ಲಿಕಾಯಿ ನಿಂಬೆಹಣ್ಣು ಮೂಸುಂಬಿ ತಿನ್ನುವುದರಿಂದ ವಿಟಮಿನ್ ಸಿ ಅಂಶ ನಮ್ಮ ದೇಹಕ್ಕೆ ಸೇರುತ್ತದೆ, ಹಾಗೂ ಮುಖ್ಯವಾಗಿ ಪ್ಲೇಟ್ಲೆಟ್ಸ್ ಕೌಂಟ್ ಅನ್ನು ಹೆಚ್ಚು ಮಾಡುತ್ತದೆ.