ನವದೆಹಲಿ ; ಆಪಲ್ ಮತ್ತು ಫಾಕ್ಸ್‌ಕಾನ್ ಕಂಪೆನಿಗಳು ವಿವಾಹಿತ ಮಹಿಳೆಯರನ್ನು ಐಫೋನ್ ಅಸೆಂಬ್ಲಿ ಉದ್ಯೋಗಗಳನ್ನು ನಿರಾಕರಿಸಿದೆ ಎಂದು ರಾಯಿಟರ್ಸ್ ಸುದ್ದಿ ಬಹಿರಂಗಪಡಿಸಿದ ನಂತರ “ವಿವರವಾದ ವರದಿ” ಸಲ್ಲಿಸುವಂತೆ ತಮಿಳುನಾಡಿಗೆ ತಿಳಿಸಲಾಗಿದೆ ಎಂದು ಕೇಂದ್ರವು ಬುಧವಾರ ಹೇಳಿದೆ.
ತನಿಖೆಗೆ ಸೂಚಿಸುವ ಸಮಯದಲ್ಲಿ ಕೇಂದ್ರವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1976 ರ ಸಮಾನ ಸಂಭಾವನೆ ಕಾಯಿದೆಯನ್ನು ಉಲ್ಲೇಖಿಸಿ, “ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಯಾವುದೇ ತಾರತಮ್ಯವನ್ನು ಮಾಡಬಾರದು” ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದೂ ತಿಳಿಸಿದೆ.
ವಿವಾಹಿತ ಮಹಿಳೆಯರನ್ನು ಉದ್ಯೋಗದಿಂದ ದೂರವಿಡುವ ಫಾಕ್ಸ್‌ಕಾನ್‌ನ ನೀತಿಯನ್ನು ರಾಯಿಟರ್ಸ್ ಬಹಿರಂಗಪಡಿಸಿದ ನಂತರ ಪ್ರಮುಖ ಐಫೋನ್ ತಯಾರಿಕಾ ಕಾರ್ಖಾನೆಯ ಘಟಕದ ಕುರಿತು ತಮಿಳುನಾಡಿನ ಕಾರ್ಮಿಕ ಇಲಾಖೆಯಿಂದ ವಿವರವಾದ ವರದಿಯನ್ನು ಕೋರಲಾಗಿದೆ ಎಂದು ಸಚಿವಾಲಯ ಹೇಳಿದೆ. ಕಾರ್ಮಿಕ ಸಚಿವಾಲಯವು ಪ್ರಾದೇಶಿಕ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಗೆ “ವಾಸ್ತವ ವರದಿಯನ್ನು” ನೀಡುವಂತೆ ನಿರ್ದೇಶಿಸಿದೆ ಎಂದು ಹೇಳಿದರು.
ಆಪಲ್ ಮತ್ತು ಫಾಕ್ಸ್‌ಕಾನ್ ಸರ್ಕಾರದ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡುವ ವಿನಂತಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ತಮಿಳುನಾಡು ರಾಜ್ಯ ಸರ್ಕಾರವು ಕೂಡ ಕಚೇರಿ ಸಮಯದ ನಂತರ ಪ್ರತಿಕ್ರಿಯೆಗಾಗಿ ರಾಯಿಟರ್ಸ್‌ನ ವಿನಂತಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.
ಮಂಗಳವಾರ ಪ್ರಕಟವಾದ ರಾಯಿಟರ್ಸ್ ತನಿಖೆಯ ಪ್ರಕಾರ, ಫಾಕ್ಸ್‌ಕಾನ್ ವಿವಾಹಿತ ಮಹಿಳೆಯರನ್ನು ತಮ್ಮ ಅವಿವಾಹಿತ ಸಹವರ್ತಿಗಳಿಗಿಂತ ಹೆಚ್ಚಿನ ಕೌಟುಂಬಿಕ ಜವಾಬ್ದಾರಿಗಳನ್ನು ಹೊಂದಿರುವ ಆಧಾರದ ಮೇಲೆ ತಮಿಳುನಾಡಿನ ಚೆನ್ನೈ ಬಳಿಯ ತನ್ನ ಪ್ರಮುಖ ಇಂಡಿಯಾ ಐಫೋನ್ ಸ್ಥಾವರದಲ್ಲಿ ಕೆಲಸದಿಂದ ವ್ಯವಸ್ಥಿತವಾಗಿ ಹೊರಗಿಟ್ಟಿದೆ ಎಂದು ಆರೋಪಿಸಲಾಗಿದೆ.
ಫಾಕ್ಸ್‌ಕಾನ್ ನೇಮಕಾತಿ ಏಜೆಂಟ್‌ಗಳು ಮತ್ತು ರಾಯಿಟರ್ಸ್ ಸಂದರ್ಶಿಸಿದ ಹೆಚ್‌ಆರ್ ಮೂಲಗಳ ಪ್ರಕಾರ ಕುಟುಂಬ ಕರ್ತವ್ಯಗಳು, ಗರ್ಭಧಾರಣೆ ಮತ್ತು ಹೆಚ್ಚಿನ ಗೈರುಹಾಜರಿಯನ್ನು ಬಯಸುತ್ತಾರೆ ಎಂದು ಫಾಕ್ಸ್‌ಕಾನ್ ಘಟಕದಲ್ಲಿ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳದಿರಲು ಕಾರಣಗಳಾಗಿವೆ.
ಕಾರ್ಮಿಕ ಸಚಿವಾಲಯವು “ವಿವಾಹಿತ ಮಹಿಳೆಯರಿಗೆ ಫಾಕ್ಸ್‌ಕಾನ್ ಇಂಡಿಯಾ ಆಪಲ್ ಐಫೋನ್ ಸ್ಥಾವರದಲ್ಲಿ ಕೆಲಸ ಮಾಡಲು ಅನುಮತಿಸದಿರುವ ಮಾಧ್ಯಮ ವರದಿಗಳನ್ನು ಗಮನಿಸುತ್ತದೆ” ಎಂದು ಹೇಳಿಕೆ ತಿಳಿಸಿದೆ.
ಇದಕ್ಕೂ ಮುನ್ನ, ಮಂಗಳವಾರದ ವರದಿಗಾಗಿ ರಾಯಿಟರ್ಸ್‌ನ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ, ಆಪಲ್ ಮತ್ತು ಫಾಕ್ಸ್‌ಕಾನ್ 2022 ರಲ್ಲಿ ನೇಮಕಾತಿ ಮಾಡುವಲ್ಲಿನ ಲೋಪಗಳನ್ನು ಒಪ್ಪಿಕೊಂಡಿವೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅವರು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಶ್ರೀಪೆರಂಬದೂರ್ ಸ್ಥಾವರದಲ್ಲಿ ರಾಯಿಟರ್ಸ್ ದಾಖಲಿಸಿದ ಎಲ್ಲಾ ತಾರತಮ್ಯದ ನೇಮಕಾತಿಗಳು 2023 ಮತ್ತು 2024 ರಲ್ಲಿ ನಡೆದಿವೆ.
ಆಪಲ್, “2022 ರಲ್ಲಿ ನೇಮಕ ಮಾಡುವ ಅಭ್ಯಾಸಗಳ ಬಗ್ಗೆ ಕಾಳಜಿಯನ್ನು ಮೊದಲು ವರದಿ ಆದಾಗ , ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ ಮತ್ತು ಸಮಸ್ಯೆಗಳನ್ನು ಗುರುತಿಸಲು ಮತ್ತು ನಮ್ಮ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮಾಸಿಕ ಲೆಕ್ಕಪರಿಶೋಧನೆಗಳನ್ನು ನಡೆಸಲು ನಮ್ಮ ಪೂರೈಕೆದಾರರೊಂದಿಗೆ ಕೆಲಸ ಮಾಡಿದೆವು,” ಫಾಕ್ಸ್‌ಕಾನ್ ಸೇರಿದಂತೆ ಅದರ ಎಲ್ಲಾ ಪೂರೈಕೆದಾರರು, ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದಿದೆ.
“ವೈವಾಹಿಕ ಸ್ಥಿತಿ, ಲಿಂಗ, ಧರ್ಮ ಅಥವಾ ಯಾವುದೇ ಇತರ ರೂಪದ ಆಧಾರದ ಮೇಲೆ ಉದ್ಯೋಗ ತಾರತಮ್ಯದ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತದೆ” ಎಂದು ಫಾಕ್ಸ್‌ಕಾನ್ ಹೇಳಿದೆ.