
ರೇಣುಕಾಚಾರ್ಯ ಕೊಲೆ ಕೇಸ್‌ನಲ್ಲಿ ಅಂದರ್ ಆಗಿರುವ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದೆ. ಈ ನಡುವೆ ದರ್ಶನ್ ಪಿಸ್ತೂಲ್ ವಶಕ್ಕೆ ಪಡೆಯುವಂತೆ ಬೆಂಗಳೂರು ಕಮಿಷನರ್ ಸೂಚನೆ ನೀಡಿದ್ದಾರೆ. ದರ್ಶನ್ ಬಳಿ ಯುಎಸ್ ಮೇಡ್ ಪಿಸ್ತೂಲ್ ಇದ್ದು, ಕೂಡಲೇ ವಶಕ್ಕೆ ಪಡೆದುಕೊಳ್ಳಲು ಸೂಚಿಸಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಶಸ್ತ್ರಾಸ್ತ್ರಗಳನ್ನ ಸರೆಂಡರ್ ಮಾಡ್ಬೇಕು ಅನ್ನೋದು ನಿಯಮ. ಆದ್ರೆ, ಗಣ್ಯರಿಗೆ ಅನಿವಾರ್ಯತೆ ಇದ್ದಾಗ ಸೂಕ್ತ ದಾಖಲೆ ನೀಡಿ ವಿನಾಯಿತಿ ಪಡೆಯಬಹುದು. ಇದೇ ರೀತಿ ವಿನಾಯಿತಿ ಮೇರೆಗೆ ದರ್ಶನ್ ಪಿಸ್ತೂಲ್ ಇಟ್ಟುಕೊಂಡಿದ್ರು. ಅದೇ ರೀತಿ ದರ್ಶನ್ ಕೂಡಾ ಪಿಸ್ತೂಲ್ ಇರಿಸಿಕೊಂಡಿದ್ದರು.

ಪ್ರದೂಷ್ ಬಳಿ ಪರವಾನಗಿ ಪಡೆದ 1 ಪಿಸ್ತೂಲ್ ಇತ್ತು. ಪ್ರದೂಷ್ ಪಿಸ್ತೂಲ್ ಕೂಡ ವಶಕ್ಕೆ ಪೊಲೀಸರಿಗೆ ಕಮಿಷನರ್ ದಯಾನಂದ್ ಸೂಚನೆ ನೀಡಿದ್ದಾರೆ. ಸದ್ಯ ಬಂಧನದಲ್ಲಿರುವ ಪಿಸ್ತೂಲ್ಗಳನ್ನು ವಶಕ್ಕೆ ಪಡೆಯಲು ಪೊಲೀಸ್ ಕಮಿಷನರ್ ದಯಾನಂದ್ ಸೂಚನೆ ನೀಡಿದ್ದಾರೆ.