ರಾಜ್ಯದಲ್ಲಿ ಹಾಲಿನ ದರ (Milk rate) ಹೆಚ್ಚಾಗಿಲ್ಲ, ಅಷ್ಟೇ ರೇಟ್ ಇದೆ ಎಂದು ಹಾಲಿನ ದರ ಹೆಚ್ಚಳ ಸಂಬಂಧ ಸಿಎಂ ಸಿದ್ದರಾಮಯ್ಯ (Cm Siddaramaiah) ಪ್ರತಿಕ್ರಿಯಿಸಿದ್ದಾರೆ. ಈಗ ಪ್ರತಿ ಪ್ಯಾಕೆಟ್ನಲ್ಲಿ ಹಾಲಿನ ಕ್ವಾಂಟಿಟಿ ಹೆಚ್ಚಾಗಿದೆ ಅದಕ್ಕೆ ಬೆಲೆ ಹೆಚ್ಚಿಸಿದ್ದೇವೆ ಎಂದಿದ್ದಾರೆ.
![](https://pratidhvani.com/wp-content/uploads/2024/06/IMG_8425.jpeg)
ಬೆಂಗಳೂರಿನಲ್ಲಿ (Bangalore) ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,1 ಪ್ಯಾಕೆಟ್ನಲ್ಲಿ 50 ML ಹಾಲು ಹೆಚ್ಚಾಗಿದೆ, ಹಾಗಾಗಿ ₹2 ಹೆಚ್ಚಾಗಿದೆ ಅಷ್ಟೇ.ಸುಖಾಸುಮ್ಮನೆ ಕೇಲವ ಹಾಲಿನ ದರ ಏರಿಸಿಲ್ಲ. BJP ಅವರ ಕಾಲದಲ್ಲಿ 90 ಲಕ್ಷ ಹಾಲು ಉತ್ಪಾದನೆ ಇತ್ತು. ನಮ್ಮ ಕಾಲದಲ್ಲಿ 99 ಲಕ್ಷ ಹಾಲು ಉತ್ಪಾದನೆ ಆಗುತ್ತಿದೆ, ಹೀಗಾಘಿ ಹೆಚ್ಚು ಹಾಲು ನೀಡಿ ಅದಕ್ಕೆ ತಕ್ಕಂತೆ ದರ ಹೆಚ್ಚಿಸಿದ್ದೇವೆ ಎಂದಿದ್ದಾರೆ.
![](https://pratidhvani.com/wp-content/uploads/2024/06/IMG_8413-1.jpeg)
ಈಗ ಹೆಚ್ಚಿಸಿರುವ ದರ ರೈತರಿಗೆ ತಲುಪಲಿದೆ. ಆದ್ರೆ ಬಿಜೆಪಿಯವರು ಇದನ್ನು ವಿರೋಧಿಸುವ ಮೂಲಕ, ತಾವು ರೈತ ವಿರೋಧಿಗಳು ಎಂಬುದನ್ನ ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕರು ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.