ಹಾಸನ (Hassan) ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ರಾಜಕೀಯವಾಗಿ ಛಾಪು ಮೂಡಿಸಿದ್ದ ಮಾಜಿ ಸಚಿವ ರೇವಣ್ಣ (X minister Revanna) ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟಗಳು ಕಳೆದ ಎರಡು ತಿಂಗಳುಗಳಂದ ಎದುರಾಗಿತ್ತಲೆ ಇವೆ. ಪ್ರಜ್ವಲ್ ರೇವಣ್ಣ (Prajwal revanna) ಪ್ರಕರಣದ ನಂತರ ಇದೀಗ ಸೂರಜ್ ರೇವಣ್ಣ (Sura) revanna) ಸರದಿ.
ಮೊದಲು ಲೈಗಿಂಕ ದೌರ್ಜನ್ಯ, ಅತ್ಯಾಚಾರ ಆರೋಪ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂತು.ಸದ್ಯ ಈಗ ಇವರು ಎಸ್ಐಟಿ (SIT) ಕಸ್ಟಡಿಯಲ್ಲಿದ್ದಾರೆ ಸಂತ್ರಸ್ತೆಯ ಕಿಡ್ನಾಪ್ (Kidnap) ಆರೋಪದಡಿ ಹೆಚ್.ಡಿ.ರೇವಣ್ಣ (HD Revanna) ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದ್ರು.
ಅದೇ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani revanna) ಕೂಡ ಬಂಧನ ಆಗೋ ಸಾಧ್ಯತೆ ಇತ್ತು, ಆದ್ರೆ ಜಾಮೀನು ಸಿಕ್ಕಿದ್ರಿಂದ ಭವಾನಿ ಬಂಧನದಿಂದ ಪಾರಾಗಿದ್ದಾರೆ. ಇದೆಲ್ಲದರ ನಡುವೆ ಇದೀಗ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಎಂಎಲ್ಸಿ ಸೂರಜ್ ರೇವಣ್ಣ ಬಂಧನವಾಗಿದೆ. ಒಟ್ಟಾರೆ ರೇವಣ್ಣ ಕುಟುಂಬಕ್ಕೆ ಶಾಕ್ ಮೇಲೆ ಶಾಕ್ ಎದುರಾಗ್ತಲೇ ಇದೆ.