ನಿತ್ಯ ಆಹಾರವನ್ನು ತಯಾರಿಸುವಾಗ ಕೆಲವೊಂದು ಪದಾರ್ಥಗಳನ್ನ ತಪ್ಪದೇ ನಾವು ಬಳಸುತ್ತೇವೆ ಆ ಪದಾರ್ಥಗಳಿಂದ ರುಚಿ ಹೆಚ್ಚೋದು ಮಾತ್ರವಲ್ಲದೇ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಆ ಸಾಲಿನಲ್ಲಿ ಕರಿಬೇವಿನ ಎಲೆ ಕೂಡ ಸೇರುತ್ತದೆ. ಇದೊಂದು ನೈಸರ್ಗಿಕ ಆಹಾರ ಉತ್ಪನ್ನ ಎಂದರೆ ತಪ್ಪಾಗುವುದಿಲ್ಲ. ಸಾಮಾನ್ಯವಾಗಿ ಅಡುಗೆಯ ಒಗ್ಗರಣೆಗೆ ಕರಿಬೇವನ್ನ ಬಳಸುತ್ತೇವೆ. ಇದರ ಸುಹಾಸನೆ ಅಥವಾ ಪರಿಮಳ ಅದ್ಬುತ. ಊಟ ಮಾಡುವಾಗ ಅಥವಾ ಆಹಾರವನ್ನು ಸೇವಿಸುವಾಗ ಕರಿಬೇವು ಸಿಕ್ಕಿದ್ರೆ ಅದನ್ನು ಎತ್ತಿ ಪಕ್ಕದಲ್ಲಿಡುತ್ತಿವಿ.. ಆದರೆ ಕರಿಬೇವನ್ನ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿದೆ ಏನೆಲ್ಲಾ ಬೆನಿಫಿಟ್ಸ್ ಇದೇ ಅನ್ನೋದರ ಡಿಟೇಲ್ಸ್ ಹೀಗಿದೆ..

ಹೆಚ್ಚು ಆಂಟಿ ಆಕ್ಸಿಡೆಂಟ್ ಇರುತ್ತದೆ
ಕರಿಬೇವಿನ ಎಲೆಗಳು ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶವನ್ನು ಹೊಂದಿರುತ್ತದೆ, ಮತ್ತು ಫ್ಲೇವನಾಯ್ಡ್ಸ್ ಅಂತ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಇವು ರಾಡಿಕಲ್ಸ್ ನ ತಟಸ್ಥ ಗೊಳಿಸಲು ಸಹಾಯ ಮಾಡುತ್ತದೆ. ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರಮಾಡುತ್ತದೆ.

ಡಯಾಬಿಟಸನ್ನು ನಿಯಂತ್ರಿಸುತ್ತದೆ
ಕರಿಬೇವಿನ ಎಲೆಗಳಲ್ಲಿ ಹೈಪರ್ಗ್ಲೈಸರ್ಮಿಕ್ ವಿರೋಧಿ ಲಕ್ಷಣಗಳಿಂದಾಗಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ಆಹಾರವನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೂ ಕೂಡ ನಿವಾರಣೆ ಮಾಡುತ್ತದೆ. ಹಾಗೂ ಕಾನ್ಸ್ಟಿಪೇಶನ್ ಗೆ ಉತ್ತಮ. ಹಾಗೂ ಡೈಹೇರಿಯಾಗೆ ಪರಿಹಾರವನ್ನು ಒದಗಿಸುತ್ತದೆ.

ಕೂದಲ ಬೆಳವಣಿಗೆಗೆ ಒಳ್ಳೆಯದು
ಕರಿಬೇವನ್ನು ಸೇವಿಸುವುದರಿಂದ ಕೂದಲು ಉದ್ದವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತದೆ. ಮಾತ್ರವಲ್ಲದೇ ಹೇರ್ ಫಾಲ್ ಕೂಡ ಕಡಿಮೆಯಾಗುತ್ತದೆ. ಇಲ್ಲವಾದಲ್ಲಿ ಕೊಬ್ಬರಿ ಎಣ್ಣೆಗೆ ಒಂದಿಷ್ಟು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಕೂದಲಿಗೆ ಹಚ್ಚುವುದರಿಂದ ಇದರಲ್ಲಿರುವ ಸಾಕಷ್ಟು ನ್ಯೂಟ್ರಿಯೆಂಟ್ಸ್ ಕೂದಲನ್ನು ಸ್ಟ್ರಂದನ್ ಮಾಡುತ್ತಿದೆ ಮತ್ತು ಬಿಳಿ ಕೂದಲು ಕಡಿಮೆ ಆಗುತ್ತದೆ..
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಕರಿಬೇವಿನಲ್ಲಿ ವಿಟಮಿನ್ ಎ ಅಂಶ ಹೆಚ್ಚಿರುವುದರಿಂದ ಕಣ್ಣಿಗೆ ಸಾಕಷ್ಟು ಪ್ರಯೋಜನಗಳಿವೆ. ಇದನ್ನ ತಪ್ಪದೇ ಸೇವಿಸುವುದರಿಂದ ಕಣ್ಣಿನ ವಿಷನ್ ಹೆಚ್ಚು ಮಾಡುತ್ತದೆ .ಹಾಗೂ ಕಣ್ಣಿಗೆ ಸಂಬಂಧಿಸಿದ ಯಾವುದೇ ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತದೆ.
