D ಬಾಸ್ ಬಂಧನದಿಂದ ಚಂದನವನದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ. ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಕೇಸ್ನಲ್ಲಿ ಚಾಲೆಂಜಿಂಗ್ ಸ್ಟಾರ್ ರನ್ನ ಬಂಧಿಸಲಾಗಿದೆ. ಪವಿತ್ರಾ ಗೌಡ ಅವರು ಎ1 ಆರೋಪಿ ಎನಿಸಿಕೊಂಡರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಸದ್ಯ ಆರು ದಿನ ಪೊಲೀಸ್ ಕಸ್ಟಡಿಗೆ ಇಬ್ಬರನ್ನು ನೀಡಲಾಗಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಸ್ಯಾಂಡಲ್ ವುಡ್ ಸುಲ್ತಾನ್ ಬ್ಯಾನ್ ಆಗ್ತಾರಾ ಅನ್ನೋ ಮಾತು ಜೋರಾಗಿಯೇ ಹರಿದಾಡುತ್ತಿದೆ. ಕನ್ನಡ ಫಿಲಂ ಚೇoಬರ್ ಅಧ್ಯಕ್ಷ ಎನ್ಎಂ ಸುರೇಶ್ ಅವರು ಈ ಕೇಸ್ ಬಗ್ಗೆ ಆಪ್ತವಲಯದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ದರ್ಶನ್ ಅವರು ಚಿತ್ರರಂಗದ ಮಾನ-ಮರ್ಯಾದೆ ಕಳೆದಿರುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಹೇಳಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ಕಲಾವಿದರ ಸಂಘದವರು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
ದರ್ಶನ್ ಸಿನಿಮಾಗಳಿಗೆ ಬೇಡಿಕೆ ಇದೆ. ಅವರು ಸಿನಿಮಾಗಳಿಂದ ಅನೇಕರಿಗೆ ಕೆಲಸ ಸಿಗುತ್ತಿದೆ. ಇವರನ್ನು ಬ್ಯಾನ್ ಮಾಡಬೇಕು ಎಂದಾಗ ಅದನ್ನು ಬೆಂಬಲಿಸೋರು ಕಡಿಮೆ ಎನ್ನುವ ಮಾತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.