ಹೆಣ್ಣು ಮಕ್ಕಳಿಗೆ ಮೆಹಂದಿಯನ್ನು ಕೈಗೆ ಹಚ್ಚಿಕೊಳ್ಳುವುದೆಂದರೆ ತುಂಬಾನೇ ಇಷ್ಟ.ಅದರಲ್ಲೂ ಮದುವೆ ಸಮಾರಂಭದಲ್ಲಿ, ಹಬ್ಬ ಹರಿದಿನಗಳಲ್ಲಿ ಚಿಕ್ಕ ಹುಡುಗಿಯರಿಂದ ಹಿಡಿದು ಮಹಿಳೆಯರು ತಪ್ಪದೇ ಮೆಹೆಂದಿಯನ್ನು ಹಾಕಿಕೊಳ್ಳುತ್ತಾರೆ.. ನಮ್ಮ ದೇಹದಲ್ಲಿ ಉಷ್ಣತೆ ಜಾಸ್ತಿ ಇದ್ರೆ ಕೈಗೆ ಹಚ್ಚಿರುವ ಗೋರಂಟಿಯ ಬಣ್ಣ ತುಂಬಾನೇ ಗಾಢವಾಗಿ ಬರುತ್ತದೇ.. ಇಲ್ಲವಾದಲ್ಲಿ ಲೈಟ್ ಕಲರ್ ಆಗುತ್ತದೆ..ಮೆಹಂದಿ ಬಣ್ಣ ಹೇಗೆ ಇದ್ರು ಹೆಚ್ಚು ಜನಕ್ಕೆ ತುಂಬಾನೆ ಇಷ್ಟ.
![](https://pratidhvani.com/wp-content/uploads/2024/06/IMG_7929.jpeg)
ಆದ್ರೆ ಕೆಲವೊಬ್ಬರಿಗೆ ಮೆಹಂದಿ ಹಚ್ಚಿದ ನಂತರ ಅಲರ್ಜಿ ಉಂಟಾಗುತ್ತದೆ, ಕೈತುರಿಕೆ ಆಗಬಹುದು ಹಾಗೂ ಕೈಯಲ್ಲಿ ಕೆಂಪು ಗುಳ್ಳೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಯಿಂದ ನಿವಾರಣೆಯನ್ನು ಹೇಗೆ ಪಡೆದುಕೊಳ್ಳಬಹುದು ಅನ್ನೋದರ ಮಾಹಿತಿ ಹೇಗಿದೆ.
ಹಿಂದೆಲ್ಲಾ ಮೆಹಂದಿ ಎಲೆಗಳನ್ನ ರುಬ್ಬಿ ಅದನ್ನ ಕೋನ್ ತಯಾರಿಸಿ ಮೆಹಂದಿಯನ್ನು ಹಚ್ಚಿಕೊಳ್ಳ ಇದ್ರು.. ಆದರೆ ಇತ್ತೀಚಿನ ದಿನದಲ್ಲಿ ಸಾಕಷ್ಟು ಕೆಮಿಕಲ್ಸ್ ಬಳಕೆ ಹೆಚ್ಚಾಗ್ತಾ ಇದೆ ಮೆಹಂದಿಯ ಬಣ್ಣ ಗಾಢವಾಗಿ ಬರಬೇಕು ಅನ್ನೋ ಕಾರಣದಿಂದ ಬೇರೆಬೇರೆ ರೀತಿಯ ರಾಸಾಯನಿಕಗಳನ್ನ ಬಳಸಲಾಗುತ್ತದೆ ಇದರಿಂದ ಕೈಯಲ್ಲಿ ಅಲರ್ಜಿಗಳ ಆಗುವಂಥದ್ದು ಸಹಜ.
ನಿಂಬೆ ರಸ
ಮೆಹಂದಿ ಹಚ್ಚಿ ನಿಮ್ಮ ಕೈಯಲ್ಲಿ ತುರಿಕೆ ಅಥವಾ ಅಲರ್ಜಿ ಆದಾಗ ನಿಂಬೆ ರಸವನ್ನ ತುರಿಕೆಯಾದ ಜಾಗದಲ್ಲಿ ಕೆಲ ನಿಮಿಷಗಳ ಕಾಲ ಹಚ್ಚಿ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಅಲರ್ಜಿ ತಕ್ಷಣಕ್ಕೆ ಕಡಿಮೆಯಾಗುತ್ತದೆ ,ಕಾರಣ ನಿಂಬೆರಸದ ಕೈಯಲ್ಲಿ ಸಿಟ್ರಿಕ್ ಅಂಶ ಹೆಚ್ಚಿರುತ್ತದೆ.
![](https://pratidhvani.com/wp-content/uploads/2024/06/IMG_7931.jpeg)
ತೆಂಗಿನ ಎಣ್ಣೆ
ದೇಹದ ಯಾವುದೇ ಭಾಗದಲ್ಲಿ ತುರಿಕೆ ಉಂಟಾದಾಗ ನೀವು ತೆಂಗಿನ ಎಣ್ಣೆಯನ್ನು ಬಳಸುವಂಥದ್ದು ಉತ್ತಮ. ಮೆಹಂದಿಯಿಂದ ತುರಿಕೆ ಅಥವಾ ಅಲರ್ಜಿ ಉಂಟಾದಾಗ ನೀವು ಒಂದು ಕಾಟನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಚ್ಚಿ ಕೆಲ ನಿಮಿಷಗಳ ಕಲಾ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಅಲರ್ಜಿ ಬೇಗನೆ ನಿವಾರಣೆ ಆಗುತ್ತದೆ.ಇಲ್ಲವೆಂದರೆ ರಾತ್ರಿ ಮಲಗುವ ಮುನ್ನ ನಿಮ್ಮ ಕೈಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡು ಬೆಳಗ್ಗೆದ್ದು ವಾಶ್ ಮಾಡುವುದು ಕೂತ ಉತ್ತಮ ಶಾಲೆ.
![](https://pratidhvani.com/wp-content/uploads/2024/06/IMG_7930.jpeg)
ಅಲೋವೆರಾ
ಅಲೋವೆರಾ ತ್ವಜೆಯ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನು ನಿವಾರಣೆ ಮಾಡುವಲ್ಲಿ ಅಲೋವೆರಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಮೆಹಂದಿಯನ್ನು ಹಚ್ಚಿ ತುರಿಕೆ ಉಂಟಾದಾಗ ಅಲೋವೆರಾ ಜೆಲ್ ಅನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ವಾಶ್ ಮಾಡುವುದರಿಂದ ತಕ್ಷಣಕ್ಕೆ ತುರಿಕೆ ಉರಿ ಅಥವಾ ನೋವು ಏನೇ ಇದ್ರೂ ಕೂಡ ನಿವಾರಣೆ ಆಗುತ್ತದೆ.
![](https://pratidhvani.com/wp-content/uploads/2024/06/IMG_7929-1.jpeg)
ಮೆಹೆಂದಿಯನ್ನ ನಿಮ್ಮ ಕೈಕಾಲುಗಳಿಗೆ ಹಚ್ಚುವ ಮುನ್ನ ದೇಹದ ಕೈ ಒಂದು ಭಾಗದಲ್ಲಿ ಚಿಕ್ಕದಾಗಿ ಮೆಹಂದಿಯನ್ನು ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ.ಅಲ್ಲಿ ಏನಾದರೂ ನಿಮಗೆ ತುರಿಕೆ ಅಥವಾ ಅಲರ್ಜಿ ಆಗದಿದ್ದಲ್ಲಿ ನಿಮ್ಮ ಕೈಗಳಿಗೆ ಮೆಹಂದಿಯನ್ನು ಹಚ್ಚಿಕೊಳ್ಳುವುದು ಉತ್ತಮ.