ಲೋಕಸಭೆ ಚುನಾವಣೆ(Lok Sabha Election 2024)ಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಎನ್ಡಿಎ ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಇನ್ನು ನರೇಂದ್ರ ಮೋದಿ(Narendra Modi) ಶನಿವಾರ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಅಧಿಕೃತ ಮೂಲಗಳ ಪ್ರಧಾನಿ ನರೇಂದ್ರ ಮೋದಿ ಜೂ.8ರಂದು ಸಂಜೆ 8 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾದ ದೇಶದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಈ ಬಾರಿ ಪಾತ್ರರಾಗಲಿದ್ದು, ಜೂನ್ 8ರಂದು ರಾತ್ರಿ 8 ಗಂಟೆಗೆ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಜ್ಯೋತಿಷ್ಯದ ಪ್ರಕಾರ 8 ಸಂಖ್ಯೆ ರಾಜಯೋಗದ ಸಂಕೇತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಮಂಗಳಕರ ಯೋಗವಾಗಿದೆ. ಅಂದರೆ ರಾಜಮನೆತನದ ಶುಭ ಕಾರ್ಯ, ರಾಜಮನೆತನದ ಅಧಿಕಾರ ಪದಗ್ರಹಣ ಸೇರಿದಂತೆ ಮಹತ್ವದ ಹಾಗೂ ಶುಭ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಜೊತೆಗೆ ಶುಭ ಶುಕ್ರವಾರವಾಗಿದೆ. ಇನ್ನು 8 ಸಂಖ್ಯೆ ಶನಿ ಗ್ರಹವನ್ನು ಸೂಚಿಸುತ್ತದೆ. ಇನ್ನು ಎಂಟು ಸಂಖ್ಯೆ ಅಂದರೆ ವಿಶೇಷವಾಗಿದ್ದು, ಶನಿ ಗ್ರಹವನ್ನು ಸೂಚಿಸುತ್ತದೆ. ಶನಿ ಉತ್ಕೃಷ್ಠತೆಯಲ್ಲಿದೆ.
ಹೀಗಾಗಿ ಯಶಸ್ಸು ಅತ್ಯಂತ ಉನ್ನತ ಮಟ್ಟದಲ್ಲಿರುತ್ತದೆ. ಜೊತೆಗೆ ಎಲ್ಲಾ ಶತ್ರುಗಳನ್ನು ಸೋಲಿಸುವ ಸಾಮರ್ಥ್ಯವಿದೆ. ಸಂಖ್ಯಾಶಾಸ್ತ್ರದ ಪ್ರಕಾರ 8 ನ್ಯಾಯದ ಸಂಕೇತವಾಗಿದೆ. ಇನ್ನು ನಾವು ಮೋದಿಯವರ ಇದುವರೆಗಿನ ನಡೆಗಳನ್ನ ಗಮನಿಸಿದರೆ ಅವರು ತಮ್ಮ ಜೀವನದ ಮುಖ್ಯ ಕೆಲಸಗಳನ್ನ ಮಾಡುವಾಗ ಬಹಳ ಶುಭ ದಿನಗಳನ್ನ ಆಯ್ಕೆ ಮಾಡಿದ್ದಾರೆ.