ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ (ongress) ಸರ್ಕಾರ ಒಂದು ವರ್ಷದ ಸಂಭ್ರಮದಲ್ಲಿ ಇರುವಾಗಲೇ ಸಚಿವರೊಬ್ಬರ ತಲೆದಂಡವಾಗೋದು ಸನ್ನಿಹಿತವಾಗಿದೆ. ಸಿಬಿಐ(CBI) ತನಿಖೆಗೆ ಎಂಟ್ರಿ ಆಗ್ತಿದ್ದಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ (B Nagendra) ತಲೆದಂಡ ಪಡೆಯೋದು ಫಿಕ್ಸ್ ಆಗಿದೆ.
ಈ ಸಂಬಂಧ ನಾಗೇಂದ್ರರನ್ನು ಕರೆಸಿಕೊಂಡು ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಎಸ್ಐಟಿ (SIT) ತನಿಖೆಯಲ್ಲಿ ಸಚಿವರ ಹೆಸರು ಉಲ್ಲೇಖವಾದ ಕಾರಣ ನಾಗೇಂದ್ರಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸಿಎಂ ಸೂಚನೆಯಂತೆ ಇವತ್ತು ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.