ನವದೆಹಲಿ: ದೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಇದರಿಂದಾಗಿ ಗ್ರಾಹಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG Gas Cylinders) ಬೆಲೆಯನ್ನು 69.50 ರೂ. ಕಡಿತ ಮಾಡಿದೆ. ಹೀಗಾಗಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನ ಚಿಲ್ಲರೆ ಮಾರಾಟ ಬೆಲೆ 1,676 ರೂ. ಇದೆ.
ಮುಂಬಯಿನಲ್ಲಿ 69.50 ರೂ. ಇಳಿಕೆಯಾಗಿದ್ದು, ಪರಿಷ್ಕೃತ ಬೆಲೆ 1,629 ರೂ.ನಷ್ಟಿದೆ. ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆಜಿ ಎಫ್‌ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆ ಕ್ರಮವಾಗಿ 30.50 ರೂ. ಮತ್ತು 7.50 ರೂ. ರಷ್ಟು ಕಡಿತವಾಗಿದ್ದವು.
ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಹಾಗೂ ಪೂರೈಕೆ-ಬೇಡಿಕೆ ಯಂತಹ ವಿವಿಧ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಿಲಿಂಡರ್ ಬೆಲೆ ಪರಿಷ್ಕರಿಸಲಾಗುತ್ತದೆ.