ಪ್ರಜ್ವಲ್ ರೇವಣ್ಣ (Prajwal Revanna) ತನ್ನ ವಿರುದ್ಧ ಕಾಂಗ್ರೆಸ್‌ನವರು (congress) ಷಡ್ಯಂತ್ರ ನಡೆಸಿದ್ದಾರೆಂಬ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ (Dinesh gundurao) ಪ್ರತಿಕ್ರಿಯಿಸಿ, ಇನ್ನೂ ಅವರ ಅಹಂಕಾರ ಇಳಿದಿಲ್ಲ ಅನ್ಸುತ್ತೆ ವಿಡಿಯೋ ತಯಾರು ಮಾಡಿದವರು ಯಾರು? ಅಂತ ಪ್ರಶ್ನೆ ಮಾಡಿದ್ದಾರೆ.
ಮೊದಲು ಎಸ್‌ಐಟಿ (SIT) ಮುಂದೆ ಶರಣಾಗಿ ಕಾನೂನನ್ನು ಎದುರಿಸಬೇಕು, ದೇಶ ಬಿಟ್ಟು ಹೋಗಿ ಹೇಳಿಕೆ ಕೊಡಲು ಯಾವ ನೈತಿಕತೆ ಇದೆ ಅಂತ ತಿರುಗೇಟು ಕೊಟ್ಟಿದ್ದಾರೆ. ಸಂಸತ್ ಸದಸ್ಯರಾಗಿ, ದೊಡ್ಡ ಕುಟುಂಬದ ಸದಸ್ಯನಾಗಿ ಇನ್ನೊಬ್ಬರಿಗೆ ಮಾದರಿಯಾಗಬೇಕು, ಅದು ಬಿಟ್ಟು ವಿದೇಶಕ್ಕೆ ಓಡಿ ಹೋಗೋದಾ? ಎಂದು ಪ್ರಶ್ನಿಸಿದ್ದಾರೆ.
ವಿದೇಶದಿಂದ ವಾಪಸ್ ಬರಲು ಇಷ್ಟು ದಿವಸ ಬೇಕಾ? ತಪ್ಪು ಮಾಡಿಲ್ಲವಾದ್ರೆ ಧೈರ್ಯವಾಗಿ ತನಿಖೆ ಎದುರಿಸಬೇಕಿತ್ತು, ಅವರು ತಪ್ಪು ಮಾಡಿದ್ರೆ ಶಿಕ್ಷೆಯಾಗಲಿದೆ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.