ಯುವತಿಯರ ಫೋಟೋಗಳನ್ನ (Photos) ವಿಕೃತವಾಗಿ ಮಾರ್ಫಿಂಗ್ (Morphing) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಯುವಕನನ್ನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು (Crime police) ಬಂಧಿಸಿದ್ದಾರೆ.
ಈತ ಅಪ್ರಾಪ್ತ ಬಾಲಕಿಯರ ಫೋಟೋಗಳನ್ನ ಹೇಗಂದ್ರೆ ಹಾಗೆ ಮಾರ್ಫ್ ಮಾಡ್ತಿದ್ದ ಆರೋಪಿಯಾಗಿದ್ದು, ಫೋಟೋಗಳನ್ನ ಮಾರ್ಫ್ ಮಾಡಿ ಇನ್ಸ್ ಸ್ಟಾಗ್ರಾಮ್ (Instagram) ಮೂಲಕ ಶೇರ್ ಮಾಡ್ತಿದ್ದ.
ಇತ್ತೀಚೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳ ಫೋಟೋ ಮಾರ್ಫ್ ಮಾಡಿದ್ದ ಆರೋಪಿಯ ಬಗ್ಗೆ ಪೋಷಕರು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದರು.ತನಿಖೆ ನಡೆಸಿರೋ ಪೊಲೀಸರಿಂದ ಆರೋಪಿಯನ್ನ ಬಂಧಿಸಿದ್ದಾರೆ.