ಮಕ್ಕಳಿಗೆ ಊಟ ತಿಂದಿ ಅಂದ್ರೆ ಅಷ್ಟಕ್ಕೇ ಅಷ್ಟೇ . ಮಕ್ಕಳಿಗೆ ಊಟ ತಿಂಡಿ ಮಾಡಿಸುವುದು ಸುಲಭವಲ್ಲ .ಕೆಲವು ಮಕ್ಕಳಂತು ಕೂತಲ್ಲಿ ಕೂರುವುದಿಲ್ಲ ಓಡಾಡುತ್ತಾನೆ ಊಟ ಮಾಡಿಸಬೇಕು..ಇನ್ನು ಊಟ ಬೇಡ ಹಸಿವಿಲ್ಲ ಅನ್ನೋ ಮಾತುಗಳು ಮಕ್ಕಳಿಂದ ಕೇಳಿ ಬರುತ್ತವೆ,ಹಠ ಮಾಡ್ತಾರೆ ಆಳ್ತಾರೆ,ಯಾರಾದ್ರೂ ಗದರಿಸಿದ್ರೆ ಭಯ ಬಿದ್ದು ಊಟ ಮಾಡ್ತಾರೆ..

ಇದೆಲ್ಲ ಸರಿ ಆದ್ರೆ ಇನ್ನೂ ಒಂದಿಷ್ಟು ಮಕ್ಕಳಿಗೆ ಟಿವಿ ಮತ್ತೆ ಫೋನನ್ನು ಕೊಟ್ಟು ತಂದೆ ತಾಯಿಗಳು ಊಟ ತಿಂಡಿ ಮಾಡಿಸುತ್ತಾರೆ. ನನ್ನ ಮಗು ಫೋನ್ ಆದರೂ ನೋಡಿ ನೋಡ್ಲಿ ಟಿವಿ ಆದ್ರೂ ನೋಡಲಿ ಆದರೆ ಊಟವನ್ನು ಮಾಡಿದ್ರೆ ಸಾಕು ಎಂಬುವುದು ತಂದೆ ತಾಯಿಯ ಯೋಚನೆ ಆಗಿರುತ್ತೆ . ಆದರೆ ಇದೊಂದು ಕೆಟ್ಟ ಅಭ್ಯಾಸ ಊಟ ತಿಂಡಿಯ ಸಮಯದಲ್ಲಿ ಫೋನ್ ಅಥವಾ ಟಿವಿಯನ್ನು ಹೆಚ್ಚು ನೋಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತದೆ ಏನೆಲ್ಲ ಅನ್ನೋದರ ಮಾಹಿತಿ ಹೇಗಿದೆ.
ಊಟ ಮಾಡುವ ಸಂದರ್ಭದಲ್ಲಿ ಫೋನ್ ಅಥವಾ ಟಿವಿಯನ್ನು ನೋಡ್ತಾ ಮಕ್ಕಳು ಊಟ ಮಾಡಿದಾಗ ಅವರಿಗೆ ಏನು ತಿನ್ನುತ್ತಿದ್ದೇವೆ ಅನ್ನುವ ಅರಿವು ಇರೋದಿಲ್ಲ. ಊಟದ ಮೇಲೆ ಗಮನವಿದ್ದಾಗ ಏನು ತಿನ್ನುತ್ತ ಇದ್ದೀವಿ. ರುಚಿ ಹೇಗಿದೆ ಎಂಬುದು ತಿಳಿಯುತ್ತದೆ ಆದರೆ ಮೊಬೈಲ್ ಬಳಕೆಯಿಂದ ಬ್ರೈನ್ ಹಾಗೂ ಗಟ್ ಕನೆಕ್ಷನ್ ಇರುವುದಿಲ್ಲ..ಹಾಗಾಗಿ ಡೈಜೆಶನ್ ಕೂಡ ಸರಿಯಾಗಿ ಆಗುವುದಿಲ್ಲ..ಜೀರ್ಣಕ್ರಿಯೆ ಕೊರತೆ ಇಂದಾಗಿ ಹಸಿವು ಆಗುವುದಿಲ್ಲ.

ಇನ್ನು ಟಿವಿ ಹಾಗೂ ಮೊಬೈಲ್ ಮೇಲೆ ಗಮನವಿದ್ದಾಗ ಎಷ್ಟು ಆಹಾರವನ್ನು ಸೇವನೆ ಮಾಡ್ತೀವಿ ಅನ್ನುವ ಅರಿವು ಕೂಡ ಮಕ್ಕಳಿಗಿರುವುದಿಲ್ಲ. ಹೊಟ್ಟೆ ತುಂಬಿತು ಸಾಕು ಅನ್ನುವಂತದ್ದನ್ನು ಕೂಡ ಮಕ್ಕಳು ಹೇಳೋದಿಲ್ಲ. ಇದನ್ನು ಗಮನಿಸದ ತಂದೆ ತಾಯಿಯರು ಅತಿಯಾಗಿ ಮಕ್ಕಳಿಗೆ ತಿನಿಸುತ್ತಾರೆ ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಹಾಗೂ ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲಿ ಅತಿಯಾಗಿ ದಪ್ಪವಾಗುವಂತಹ ಸಮಸ್ಯೆ ಕೂಡ ಶುರುವಾಗುತ್ತದೆ.
ಊಟ ತಿಂಡಿ ಸಂದರ್ಭದಲ್ಲಿ ಚೆನ್ನಾಗಿ ಜಗಿಯಬೇಕು ನಂತರ ಅದನ್ನು ನುಂಗಬೇಕು ಈ ಕ್ರಿಯೆಯನ್ನು ಎಲ್ಲರೂ ಕೂಡ ಪಾಲಿಸ್ತಾರೆ. ಪ್ರತಿಯೊಬ್ಬರೂ ಕೂಡ ಒಂದು ತುತ್ತನ್ನ 32 ಬಾರಿ ಜಗಿದು ನಂತರ ನುಂಗಬೇಕು. ಆದರೆ ಮಕ್ಕಳು ಏನ್ ಮಾಡ್ತಾರೆ ಅಂದ್ರೆ ತುತ್ತನ್ನ ಒಂದೆರಡರಿಂದ ಮೂರು ಬಾರಿ ಜಗಿದು ತಕ್ಷಣವೇ ನುಂಗುತ್ತಾರೆ. ಇದು ದೇಹಕ್ಕೆ ಒಳ್ಳೆಯದಲ್ಲಿ ಜೀರ್ಣಗಕ್ಕೆ ಕಷ್ಟವಾಗುತ್ತದೆ..

ಇನ್ನು ಈ ಒಂದು ಸಮಸ್ಯೆಯಿಂದ ಯಾವ ಮಕ್ಕಳು ಕೂಡ ಇತರರ ಜೊತೆ ಸೇರೋದನ್ನ ಕಡಿಮೆ ಮಾಡ್ತಾರೆ, ತಾವಾಯ್ತು. ತಮ್ಮ ಫೋನ್ ಅನ್ನುವ ಹಾಗೆ ಇರ್ತಾರೆ .ಅಟ್ಲೀಸ್ಟ್ ಮನೆಯಲ್ಲಿ ಎಲ್ಲರೊಡನೆ ಮಕ್ಕಳು ಮಾತನಾಡಬೇಕು ಸ್ಪೆಷಲಿ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವುದರಿಂದ ಒಂದು ರೀತಿಯ ಖುಷಿ ಹಾಗೂ ಹೆಚ್ಚು ಊಟ ಸೇರುತ್ತದೆ ಆದರೆ ಮೊಬೈಲ್ ಕೊಟ್ಟು ಕುಡಿಸುವುದರಿಂದ ಒತ್ತಿಯಾಗಿರಲು ಅಭ್ಯಾಸವಾಗುತ್ತದೆ..

ಹಾಗಾಗಿ ಮಕ್ಕಳಿಗೆ ಊಟ ಮಾಡಿಸಬೇಕಾದರೆ ಯಾವುದೇ ಕಾರಣಕ್ಕೂ ಫೋನ್ ಅಥವಾ ಟಿವಿ ಮುಂದೆ ಕೂರಿಸಿ ಊಟ ತಿಂಡಿಯನ್ನ ತಿನಿಸುವ ಅಭ್ಯಾಸವನ್ನು ನಿಲ್ಲಿಸಿ. ಇದು ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ನಿಮ್ಮ ಮಕ್ಕಳ ಮೇಲೆ ಪ್ರಭಾವವನ್ನು ಬೀರುವುದು ಖಂಡಿತ.