ನಾವೂ ಅತಿಯಾಗಿ ದಪ್ಪ ಇದ್ರೆ ಹೇಗೇ ಸಣ್ಣ ಆಗೋದು ಅನ್ನೊ ಚಿಂತೆ, ಸಣ್ಣಗಿದ್ರೆ ಹೇಗೇ ದಪ್ಪವಾಗೊದು ಅನ್ನೊ ಯೋಚನೆ ಈ ಎರಡರ ಮಧ್ಯೆ ಅಂದರೆ ಫಿಟ್ ಆಗಿ ಇರೊದಿಕ್ಕೆ ಸಾಕಷ್ಟು ಪ್ರಯತ್ನ ಮಾಡ್ತೀವಿ,ಕೆಲವರು ವ್ಯಯಾಮ ಮಾಡ್ತಾರೆ,ಯೋಗ,ಜಿಮ್ ಎಲ್ಲವು ಸರಿ.ಇದೆಲ್ಲದರ ಜೊತೆಗೆ ಡಯೇಟ್ ಕೂಡಾ ತುಂಬಾನೆ ಮುಖ್ಯ, ಈ ಡಯೇಟ್ ಜೊತೆಗೆ ನೀವೂ ಪ್ರತಿ ದಿನ ಆಯುರ್ವೇದದ ಜ್ಯೂಸ್ ಕುಡಿಯುವುದರಿಂದ ಫಿಟ್ ಮಾತ್ರಾವಲ್ಲ ತುಂಬಾನೆ ಹೆಲ್ತಿಯಾಗಿಯು ಇರ್ತಿರಾ.ಆಯುರ್ವೇದಿಕ್ ಜ್ಯೂಸ್ಗಳು ನಿಮಗೆ ನೈರ್ಸಗಿಕವಾಗಿ ಸಿಗುವಂತಹ ಹಣ್ಣ,ಹಂಪಲು,ಬೇರು,ಎಲೆಗಳಿಗೆ ಸಾಕಷ್ಟು ಗಿಡ ಮೂಲಿಕೆಗಳಿಂದ ತಯಾರಿಸುತ್ತಾರೆ. ಹಾಗಾದ್ರೆ ಹಲ್ತಿಯಾಗಿ ಫಿಟ್ ಇರೋದಿಕ್ಕೆ ಯಾವ ಜ್ಯೂಸ್ ಉತ್ತಮ ಅನ್ನೊದರ ಮಾಹಿತಿ ಹೀಗಿದೆ.
ಹಾಗಲಕಾಯಿ ಮತ್ತು ಜಾಮೂನ್ ಹಣ್ಣು
ಹಾಗಲಕಾಯಿ ಮತ್ತು ಜಾಮೂನ್ ಹಣ್ಣು ಇವರಡನ್ನ ಚನ್ನಾಗಿ ರುಬ್ಬಿ ನಂತ್ರ ಒಂದು ಬಿಳಿ ಬಟ್ಟೆಯನ್ನು ಬಳಸಿ ರಸವನ್ನು ಬೇರ್ಪಡಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗಲಕಾಯಿ ನಿಮ್ಮ ದೇಹದ ಬ್ಲೆಡ್ ಶುಗರ್ ಲೆವಲ್ನ ಕಂಟ್ರೋಲ್ ಮಾಡುತ್ತದೆ ಹಾಗೂ ಗ್ಲೂಕೋಸ್ನ ಮೈಟೈನ್ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಎರಡರ ಜ್ಯೂಸ್ ಬಿಪಿ ಗೆ ಒಳ್ಳೆಯದು,ಜೀರ್ಣ ಕ್ರಿಯೆಗೆ ಉತ್ತಮ,ಲಿವರ್ಗೆ ಒಳ್ಳೆಯದು.ಹಾಗೂ ಡಯಾಬಿಟಿಸ್ ಇದ್ದವರು ಹಾಗಲಕಾಯಿಯಿಂದ ಮಾಡಿರುವಂತಹ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ.
ನೆಲ್ಲಿಕಾಯಿ ಜ್ಯೂಸ್
ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು, ನಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ.ಇದು ನಮ್ಮ ತ್ವಜೆ ಹೊಳಪನ್ನು ಹೆಚ್ಚಿಸುತ್ತದೆ,ಇಮ್ಯುನಿಟಿನ ಬೂಸ್ಟ್ ಮಾಡುತ್ತದೆ, ಕೂದಲ ಬೆಳವಣಿಗೆ ಒಳ್ಳೆಯದು,ಡೈಜೆಶನ್ಗೆ ಉತ್ತಮ ಮದ್ದು, ಬಿಪಿಯನ್ನು ನಿಯತ್ರಿಸುತ್ತದೆ.
ಬೇಲದ ಹಣ್ಣು
ಇದನ್ನು ಪವಿತ್ರ ಹಣ್ಣು ಅಂತಾನು ಕರಿತಾರೆ, ಮಾತ್ರವಲ್ಲದೆ ನಾನ ಹೆಸರು ಈ ಹಣ್ಣಿಗಿದೆ.ಇದರಿಂದ ಆರೋಗ್ಯ ಪ್ರಜೊಜನವು ಅಷ್ಟೆಯಿದೆ.ಜೀರ್ಣ ಕ್ರಿಯೆಗೆ ಉತ್ತಮ, ಮತ್ತು ಬೇಸಿಗೆಯಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿರಿಸುತ್ತದೆ.ಡೈಜೆಶನ್ ಸಮಸ್ಯೆ ದೂರಾವಾಗುತ್ತದೆ, ಗ್ಯಾಸ್ಟ್ರಿಕ್ನಿಂದ ಮುಕ್ತಿ ದೊರೆಯುತ್ತದೆ.
ಒಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ, ಹಾಗಾಗಿ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಿ ಹಲ್ತಿಯಾಗಿರಿ.