• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಮೋದಿ ವಿರುದ್ಧ ಕಾಂಗ್ರೆಸ್‌ ಸರ್ಕಾರದಲ್ಲಿ ತನಿಖೆ..!? ಸಿದ್ಧತೆ ನಡೀತಿದ್ಯಾ..?

ಪ್ರತಿಧ್ವನಿ by ಪ್ರತಿಧ್ವನಿ
May 28, 2024
in Uncategorized
0
ಇಂಡಿಯಾ ಬಣ ಮತ ಬ್ಯಾಂಕ್ ಗಾಗಿ ಮುಜ್ರಾ ಕೂಡ ಮಾಡುತ್ತದೆ; ಮೋದಿ
Share on WhatsAppShare on FacebookShare on Telegram

ಲೋಕಸಭೆ(Lokasabha) ಕೊನೆಯ ಹಂತದ ಚುನಾವಣೆ ಇನ್ನಷ್ಟೇ ಬಾಕಿ ಇದೆ. ಭರ್ಜರಿ ಕ್ಯಾಂಪೇನ್ ನಡೀತಿದೆ. ಈ ನಡುವೆ ಕಾಂಗ್ರೆಸ್‌(Congress) ಪಾಳಯದಲ್ಲಿ ಹೊಸ ಹುಮ್ಮಸ್ಸೊಂದು ಮನೆ ಮಾಡಿದ್ದು, ಬಿಜೆಪಿ ಸರ್ಕಾರ ರಚನೆ ಆಗಲ್ಲ, INDIA ಒಕ್ಕೂಟವೇ ಸರ್ಕಾರ ರಚನೆ ಮಾಡಲಿದೆ ಅನ್ನೋ ಮಾತುಗಳು ಚರ್ಚೆಯಲ್ಲಿವೆ. ಈ ನಡುವೆ ಪ್ರಧಾನಿ ಹೇಳಿದ್ದ ಮಾತನ್ನೇ ಹಿಡಿದು ಪ್ರಧಾನಿ ಮೋದಿಯನ್ನು ತನಿಖೆಗೆ ಗುರಿಪಡಿಸುವ ರೀತಿಯ ಹೇಳಿಕೆ ನೀಡಿದ್ದಾರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ.

ADVERTISEMENT

ಮೊದಲು ನನ್ನ ತಾಯಿ ಜೀವಂತ ಇದ್ದಾಗ ನಾನು ಜೈವಿಕವಾಗಿ ಜನಿಸಿದ್ದೇನೆ ಎನ್ನುವುದನ್ನು ನಂಬುತ್ತಿದ್ದೆ. ಆದರೆ ನನ್ನ ತಾಯಿ ನಿಧನರಾದ ಬಳಿಕ ನನ್ನ ಎಲ್ಲಾ ಅನುಭವ ಗಮನಿಸಿದ್ದು, ನನ್ನನ್ನು ಪರಮಾತ್ಮನೇ ಕಳಿಸಿದ್ದಾನೆಂದು ಮನವರಿಕೆ ಆಗಿದೆ. ಈ ಚೈತನ್ಯ ತನ್ನ ಜೈವಿಕ ದೇಹದಿಂದ ಬಂದಿರಲು ಸಾಧ್ಯವಿಲ್ಲ. ಪರಮಾತ್ಮನೇ ನನಗೆ ಶಕ್ತಿ, ಸಾಮರ್ಥ್ಯ ನೀಡಿದ್ದಾನೆ. ದೇವರು ನನಗೆ ಮಾರ್ಗದರ್ಶನ ಮಾಡುತ್ತಿದ್ದಾನೆ. ನನಗೆ ಪ್ರೇರಣೆಯನ್ನೂ ಆ ದೇವರೇ ನೀಡುತ್ತಿದ್ದಾನೆ ಎಂದು ಮಾಧ್ಯಮ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಈ ಹೇಳಿಕೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಟಾಂಗ್‌ ನೀಡಿದ್ದಾರೆ.

Listen to The God :

Modi's statement that "He is not a Biological Creation" is extremely shameful.

pic.twitter.com/adhCxFHAyQ

— Sunil Lamba (@Post4Lamba) May 24, 2024

ದೇವರೇ ನನ್ನನ್ನು 2047ರವರೆಗೆ ಭಾರತದ ಸೇವೆಗೆ ಕಳುಹಿಸಿದ್ದಾನೆ. ದೇವರೇ ನನಗೆ ಮಾರ್ಗದರ್ಶನ ಮಾಡುತ್ತಿದ್ದಾನೆ. ಎಂದು ಮೋದಿ(Modi) ಆಡಿದ್ದ ಮಾತುಗಳಿಗೆ ಕಾಂಗ್ರೆಸ್​ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಪರಮಾತ್ಮನ ಕಥೆ ಏಕೆ ತಂದ್ರು ನಿಮಗೆ ಗೊತ್ತಿದೆಯಾ..?ಚುನಾವಣೆ(Election) ನಂತರ ಮೋದಿಗೆ ಜಾರಿ ನಿರ್ದೇಶನಾಲಯ ಪ್ರಶ್ನೆ ಕೇಳುತ್ತದೆ. ಅದಾನಿ ಬಗ್ಗೆ ಮೋದಿ ಅವರಿಗೆ ಪ್ರಶ್ನೆ ಕೇಳಿದಾಗ ನನಗೇನೂ ಗೊತ್ತಿಲ್ಲ, ದೇವರೇ ಹೇಳಿದ್ದು ಅನ್ನಬಹುದು. ಅದೇ ಕಾರಣಕ್ಕೆ ದೇವರು ಕಳುಹಿಸಿದ್ದಾನೆ ಎಂದು ಹೇಳುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ(Rahul Gandhi) ಗುಡುಗಿದ್ದಾರೆ. ಇನ್ನು ಉದ್ದುದ್ದ ಭಾಷಣ ಮಾಡುವುದನ್ನ ಬಿಟ್ಟುಬಿಡಿ ಮೋದಿ ಅವರೇ.. ದೇಶ ಒಡೆಯುವುದನ್ನೂ ಮೊದಲು ಬಿಡಿ ಎಂದು ಸಲಹೆ ನೀಡಿದ್ದಾರೆ.

#WATCH | Bihar | Congress leader Rahul Gandhi says, "You know why he (PM Modi) has brought this story of Parmatma? Because, after the election when this ED will ask Narendra Modi about Adani, he will say, I don't know, it was asked to me by Parmatma… Modi ji, stop giving long… pic.twitter.com/nhFiCiuSeM

— ANI (@ANI) May 27, 2024

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ(Priyanka) ವಾದ್ರಾ ಕೂಡ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದು, ದೇವರ ಹೆಸರಲ್ಲಿ ಮೋದಿ ಹಾಗು ಬಿಜೆಪಿಯವರು ವೋಟ್​ ಕೇಳುತ್ತಿದ್ದಾರೆ. ಆದರೆ ದೇವರ ಕೆಲಸವನ್ನ ಒಂದೂ ಮಾಡುತ್ತಿಲ್ಲ. ಈ ಸರ್ಕಾರದಲ್ಲಿ ಕೇವಲ ಲೂಟಿ(Looty) ನಡೆಯುತ್ತಿದೆ. ಸಂವಿಧಾನ ಬದಲಿಸುವ ಮಾತುಗಳು ಬರುತ್ತಿವೆ ಎಂದು ವಾಗ್ಬಾಣ ಬಿಟ್ಟಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ(Siddaramaiah) ಕೂಡ ಬಿಜೆಪಿಯವರಿಗೆ ಫಲಿತಾಂಶದ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಹೇಗೆ ಬೇಕೋ ಹಾಗೆ ಮಾತನಾಡ್ತಿದ್ದಾರೆ. ಮೊದಲು ಕಾಂಗ್ರೆಸ್‌ ಗೆಲ್ಲಲ್ಲ, 28ಕ್ಕೆ 28 ಸ್ಥಾನ ನಾವೇ ಗೆಲ್ತೀವಿ ಎನ್ನುತ್ತಿದ್ದರು. ಇದೀಗ ಕಾಂಗ್ರೆಸ್‌ 10-12 ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿಯವರೇ ಹೇಳ್ತಿದ್ದಾರೆ ಎಂದರೆ, ಡಿಸಿಎಂ ಡಿಕೆ ಶಿವಕುಮಾರ್‌ EVM ಮ್ಯಾಜಿಕ್‌ ಮಾಡದಿದ್ದರೆ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.

ಜೂನ್‌ 4ರ ಬಳಿಕ ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರುವ ಬಗ್ಗೆ ರಾಹುಲ್‌ ಗಾಂಧಿ ವಿಶ್ವಾಸದಲ್ಲಿದ್ದು, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮೋದಿಯನ್ನು ಪ್ರಶ್ನೆ ಮಾಡ್ತಾರೆ ಎನ್ನುವ ಮೂಲಕ ತನಿಖೆ(Investigation) ಮಾಡ್ತೇವೆ ಅನ್ನೋ ಸುಳಿವು ಕೊಟ್ಟಿದ್ದಾರೆ. ಕಡೇ ಹಂತದ ಮತದಾನಕ್ಕೆ ಎರಡ್ಮೂರು ದಿನಗಳು ಮಾತ್ರ ಬಾಕಿಯಿದ್ದು, ಸಾಧ್ಯವಾದಷ್ಟು ಜನರ ಮನಸ್ಸು ಗೆಲ್ಲುವ ಕಸರತ್ತು ನಡೀತಿದೆ. ಆದರೆ ಚುನಾವಣೆಯಲ್ಲಿ ಮತದಾರ ಯಾವ ನಿರ್ಧಾರ ಮಾಡಿದ್ದಾನೆ..? ದೆಹಲಿ(Delhi) ಗದ್ದುಗೆ ಮೇಲೆ ಕೂರುವುದಕ್ಕೆ ಯಾರನ್ನು ಆರಿಸಿದ್ದಾನೆ ಅನ್ನೋದಕ್ಕೆ ಉತ್ತರ ಜೂನ್‌ 4ರಂದು ಹೊರ ಬೀಳುವ ಫಲಿತಾಂಶದ(Result) ಮೇಲೆ ನಿರ್ಧಾರ ಆಗಲಿದೆ.

ಕೃಷ್ಣಮಣಿ

Previous Post

ಯುವಕನಿಗೆ ಪೆಟ್ರೋಲ್‌ ಸುರಿದು ಕೊಲೆ ಯತ್ನ.. ಪ್ರೀತಿ.. ಪ್ರೇಮ.. ದುರಂತ..

Next Post

Rahul Gandhi: ರಾಹುಲ್‌ ಗಾಂಧಿ ಮುಂದೆ ಕಣ್ಣೀರು ಇಟ್ಟ ಅಗ್ನಿವೀರ್..! Agniveer

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post

Rahul Gandhi: ರಾಹುಲ್‌ ಗಾಂಧಿ ಮುಂದೆ ಕಣ್ಣೀರು ಇಟ್ಟ ಅಗ್ನಿವೀರ್..! Agniveer

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada