ಮಂಡ್ಯದಲ್ಲಿ (Mandya) ಹಿಂದೂಗಳ (Hindu) ಮನೆಗಳಿಗೆ ಅನ್ಯಕೋಮಿನ ಯುವಕರು ನುಗ್ಗಿ ದಾಂಧಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಮಾರಕಾಸ್ತ್ರ ಹಿಡಿದು ಹಿಂದೂಗಳ ಮನೆಗೆ ನುಗ್ಗಿ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆ ಮಹಿಳೆಯರು, ಮಕ್ಕಳು ಸೇರಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಠಾಣೆ ಮಂದೆ ಪ್ರತಿಭಟಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ (Nagamangala) ತಾಲೂಕಿನ ಬೆಳ್ಳೂರು ಪಟ್ಟಣ ಈ ಘಟನೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕೆಂದು ಬೆಳ್ಳೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರ ಮನವಿ DYSP ಸ್ಪಂದಿಸಿ ನೀವು ಭಯ ಪಡುವ ಅಗತ್ಯವಿಲ್ಲ ನಿಮ್ಮ ಜೊತೆಗೆ ನಾವು ಇರ್ತೀವಿ ಅಂತಾ ಭರವಸೆ ನೀಡಿದ್ದಾರೆ.
ಈ ಹಿಂದೆ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ದಂಗಲ್ ಭಾರಿ ಸದ್ದು ಮಾಡಿತ್ತು. ಇದೀಗ ನಾಗಮಂಗಲದ ಈ ಪ್ರಕರಣ(Case) ಅದೇ ಸಾಲಿಗೆ ಬಂದಿದೆ. ರೈತರ(Farmer) ಹಿತ ಮತ್ತು ಕಾವೇರಿ(Kaveri) ವಿಚಾರವಾಗಿ ಮಂಡ್ಯದಲ್ಲಿ ಇದುವರೆಗೂ ರಾಜಕಾರಣ ನಡೆದುಕೊಂಡು ಬಂದಿದೆ. ಆದ್ರೆ ಇದೀಗ ಈ ಭಾಗದಲ್ಲೂ ಹಿಂದುತ್ವದ ಬೀಜ ಮೊಳಕೆಯೊಡೆಯುತ್ತಿರವಂತೆ ಕಾಣಿದೆ.











