ಈಗಾಗಲೇ ಎಲ್ಲೆಡೆ ಪುಷ್ಪ-2 (Pushpa 2) ಹವಾ ಶುರುವಾಗಿದೆ.ರಿಲೀಸ್ ಆಗಿರುವ ಟೀಸರ್ ಮತ್ತು ಪುಷ್ಪ ಟೈಟಲ್ ಸಾಂಗ್ (Pushpa tittle song) ಎಲ್ಲೆಡೆ ಹಲ್‌ಲ್ ಎಬ್ಬಿಸಿದೆ.ಜೊತೆಗೆ ಅಲ್ಲು ಅರ್ಜುನ್‌ರ (Allu arjun) ಸಿಗ್ರೇಚರ್ ಸ್ಟೆಪ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಯುವಕರಲ್ಲಿ ಕ್ರೇಝ್ ಹೆಚ್ಚಿಸಿದೆ.
ಈ ಎಲ್ಲದರ ಮಧ್ಯೆ, ಇದೀಗ ಸಿನಿಮಾ ತಂಡದಿಂದ ಮತ್ತೊಂದು ಅಪ್ಲೇಟ್ ಸುಕ್ಕಿದೆ. ಪುಷ್ಪ ಸಿನಿಮಾದ ಪಾರ್ಟ್ 1ನಲ್ಲಿ ಸಮಂತಾ (Samantha) ನಟನೆಯ ಹೂ ಅಂಟಾವ ಹಾಡು ಪಡ್ಡೆ ಹುಡುಗರನ್ನ ಹುಚ್ಚೆಬ್ಬಿಸಿತ್ತು. ಇದೀಗ ಪುಷ್ಪ 2 ಸಿನಿಮಾದಲ್ಲೂ ಇಂಥದ್ದೇ ಐಟಂ ಸಾಂಗ್ ಇರಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಸಲ ಪುಷ್ಪರಾಜ್ ಜೊತೆ ಐಟಂ ಸಾಂಗ್ನಲ್ಲಿ ಬಾಲಿವುಡ್ ಹಾಟ್ ಬೆಡಗಿ ತೃಪ್ತಿ ದಿಮ್ಮಿ (Tripthi dhimri) ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ತೃಪ್ತಿ ದಿಮ್ಮಿ ಜೊತೆ ಮತ್ತೊಬ್ಬ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Jhanhavi kapoor) ಸಹ ಸಾಥ್ ಕೊಡಲಿದ್ದಾರೆ. ಪುಷ್ಪ ಸ್ಪೆಷಲ್ ನಂಬರ್ನಲ್ಲಿ ಅಲ್ಲು ಅರ್ಜುನ್ ಜೊತೆ ಇಬ್ಬರು ನಟಿರಯರು ಹೆಜ್ಜೆ ಹಾಕಲಿದ್ದು, ಮೂವರು ಒಂದೇ ಸ್ಟೇಜ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.