ಬಂಗಾಳಕೊಲ್ಲಿಯಲ್ಲಿ (Bay of bengal) ಸೃಷ್ಟಿಯಾಗಿರೋ ರೀಮಲ್ (Reemal) ಚಂಡಮಾರುತ ನಾಳೆ ಸಂಜೆ ಪಶ್ಚಿಮ ಬಂಗಾಳ ಹಾಗೂ ಪಕ್ಕದ ಬಾಂಗ್ಲಾದೇಶದ (West bengal) ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳ ಹಿಂದೆಯೇ ರೂಪುಗೊಂಡಿರುವ ಚಂಡಮಾರುತ ಇಂದು ಸೈಕ್ಲೋನ್ (Cyclone) ರೂಪ ತಾಳಲಿದೆ.
ಹೀಗಾಗಿ ಇನ್ನೆರಡು ದಿನಗಳ ಕಾಲ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳು, ಮಿಜೋರಾಂ, ತ್ರಿಪುರಾ ಹಾಗೂ ದಕ್ಷಿಣ ಮಣಿಪುರದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.
ಗಂಟೆಗೆ 100-110 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.. ಮುಂದಿನ 5 ದಿನಗಳ ಕಾಲ ಆಂಧ್ರಪ್ರದೇಶ (Andra pradesh) ಕರಾವಳಿಯಲ್ಲಿ ಭಾರಿ ಮಳೆಯ ಮನ್ಸೂಚನೆ ನೀಡಿದೆ. ಮೀನುಗಾರರು ಮೇ 27 ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.