ದಾವಣಗೆರೆ ಜಿಲ್ಲೆ ಚೆನ್ನಗಿರಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆದಿಲ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.ಮಾತನಾಡಿರುವ ಡಾ.ಜಿ.ಪರಮೇಶ್ವರ್, ದೂರಿನ ಬೆನ್ನಲ್ಲೆ ಆದಿಲ್ ನನ್ನ ಪೊಲೀಸರು ಸ್ಟೇಷನ್ ಗೆ ಕರೆತಂದಿದ್ದಾರೆ .ಕರೆತಂದ 7 ನಿಮಿಷದಲ್ಲೇ ಆರೋಗ್ಯದಲ್ಲಿ ಏರು ಪೇರಾಗಿ ಸಾವನ್ನಪ್ಪಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿ ಆದಿಲ್ ಸಾವನ್ನಪ್ಪಿದ್ದಾನೆ . ಪೋಸ್ಟ್ ಮಾಟರ್ಮ್ ನಲ್ಲಿ ಸಾವಿಗೆ ಕಾರಣ ತಿಳಿದು ಬರುತ್ತದೆ ಎಂದರು.ಆದಿಲ್ ಸಾವು ಬೆನ್ನಲ್ಲೆ ಲಾಕಪ್ ಡೆತ್ ಎಂದು ಆರೋಪಿಸಿ ರೊಚ್ಚಿಗೆದ್ದ ಜನರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಲ್ಲು ತೂರಾಟ ನಡೆದಿದ್ದು, 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂ ಆಗಿವೆ. ಕಿಟಕಿಗಳು ಪುಡಿಪುಡಿಯಾಗಿದ್ದು ಚೆನ್ನಗಿರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚೆನ್ನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ
ನಟ ಅಲ್ಲು ಅರ್ಜುನ್ ಬಂಧನ.. ರೇವಂತ್ ರೆಡ್ಡಿ ಬಿಚ್ಚಿಟ್ಟ ರಹಸ್ಯ..
ಪುಷ್ಪಾ 2 ಸಿನಿಮಾ ಪ್ರೀ ರಿಲೀಸ್ ಈವೆಂಟ್ ವೇಳೆ ಕಾಲ್ತುಳಿತ ಸಂಭವಿಸಿತ್ತು. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿ ರೇವತಿ ಎಂಬಾಕೆ ಸಾವನ್ನಪ್ಪಿದ್ದರು. ಅಭಿಮಾನಿ ಸಾವಿನ...
Read moreDetails