ಹಲ್ಲು ನೋವು, ಅಬ್ಬಬ್ಬಾ ಈ ನೋವನ್ನ ಅವುಭವಿಸದವರಿಗೆ ಮಾತ್ರ ಗೊತ್ತಿರುದ್ದೆ ಇದರ ಯಾತನೆ. ಯಾವ ನೋವನ್ನು ಬೇಕಾದ್ರು ತಡೆದುಕೊಳ್ಳಬಹುದು ಆದ್ರೆ ಈ ಹಲ್ಲು ನೋವು ಆಗೋದಿಲ್ಲಾ ಯಮಯಾತನೆ ಎಂಬುವುದು ಕೆಲವರು ಮಾತು. ಹಲ್ಲು ಹುಳುಕಾದಾಗ,ಕ್ಯಾವಿಟೀಸ್,ಕ್ಯಾಲ್ಸಿಯಂ ಹೊರತೆಯಿಂದಾ ಈ ಸಹಿಸಲಾಗದ ಹಲ್ಲು ನೋವು ಶುರುವಾಗುತ್ತದೆ.ಹಲ್ಲಿನ ಬುಡ ಅಂದ್ರೆ ಬೇರುಗಳಲ್ಲಿ ಹುಳುಕಾದ್ರೆ ಹೆಚ್ಚು ನೋವು ಕಾಡುತ್ತದೆ. ಹಲ್ಲು ನೋವಿನಿಂದ ಕಲವು ಬಾರಿ ಕಣ್ಣು ನೋವು,ತಲೆ ನೋವು ಶುರವಾಗುತ್ತದೆ,ಕೆಲವರಿಗೆ ದವಡೆ ಅಥವ ಕೆನ್ನೆ ಭಾಗ ಸ್ವೆಲ್ ಆಗುತ್ತದೆ.
ಹಲ್ಲು ನೋವಾದಗ ತಣ್ಣಗಿರುವ ನೀರನ್ನು ಕುಡಿಯಲು ಅಸಾಧ್ಯ, ಅದರಲ್ಲು ಜ್ಯೂಸ್, ಐಸ್ ಕ್ರೀಮ್ ತಿಂದ್ರೆ ಸಾಕು ಜುಮ್ ಎನ್ನುತ್ತದೆ. ಸಿಹಿ ತಿಂಡಿ ತಿನ್ನಾಗ ಕೂಡ ಈ ನೋವು ಹೆಚ್ಚಾಗುತ್ತದೆ..ಇನ್ನು ಕಲವರಿಗೆ ಕಾಡುವ ಸಮಸ್ಯೆ ಅಂದ್ರೆ ರಾತ್ರಿ ವೇಳೆ ನೋವಿನ ತೀವ್ರತೆ ಹೆಚ್ಚಾಗುತ್ತದೆ..ಒಮ್ಮ ಹಲ್ಲು ನೋವು ಶುರುವಾದ್ರೆ ನಾವು ಚಿಕಿತ್ಸೆ ಪಡೆಯುವುದು ಉತ್ತಮೆ..ತಕ್ಷಣ ಆಗದಿದ್ದಲ್ಲಿ ನೀವು ಈ ಮದ್ದನ್ನು ಬಳಸಿ ಆ ಕ್ಷಣಕ್ಕೆ ಹಲ್ಲು ನೋವಿನಿಂದ ಸುಧಾರಿಸಿಕೊಳ್ಳಬುದು.
ಬೆಳ್ಳುಳ್ಳಿ
ಬಹಳ ಹಿಂದಿನಿಂದಲು ಬೆಳ್ಳುಳ್ಳಿಯನನ್ನ ಔಷಧಿಯನ್ನಾಗಿ ಬಳಸುತ್ತಿದ್ದಾರೆ. ಬೆಳ್ಳುಳ್ಳಿಯಲ್ಲಿ ಆಲಿಸಿನ್ ಅಂಶ ಹೆಚ್ಚಿರುವುದರಿಂದ ಬ್ಯಾಕ್ಟೀರಿಯ ವಿರುದ್ಧ ಹೋರಾಡುತ್ತದೆ. ಹಾಗೂ ನೋವನ್ನು ಶಮನ ಮಾಡುವ ಶಕ್ತಿ ಕೂಡಾ ಬೆಳ್ಳುಳ್ಳಿಗಿದೆ. ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನ ಜೆಜ್ಜಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರಸಿ .ಬಳಿಕ ಅದನ್ನು ನೋವಿನ ಜಾಗದಲ್ಲಿ ಇರಸಿ.ಕೆಲ ನಿಮಿಷ ಹಾಗೆ ಬಿಡಿ.ಇದರಿಂದ ನೋವು ತಕ್ಷಣವೆ ಕಡಿಮೆಯಾಗುತ್ತದೆ.
ಬಿಸಿ ನೀರು ಮತ್ತು ಉಪ್ಪು
ಈ ಮದ್ದನ್ನು ಹೆಚ್ಚು ಜನ ಮಾಡಿರ್ತಾರೆ.ಒಂದು ಲೋಟ ಬಿಸಿ ನೀರಿಗೆ,ಅರ್ಧ ಟೇಬಲ್ ಸ್ಪೂನ್ ಅಷ್ಟು ಉಪ್ಪನ್ನು ಬೆರಸಿ.ನಂತ್ರ ಆ ನೀರಿನಿಂದ ಬಾಯಿನ್ನ ಮುಕ್ಕಳಿಸಿ.ಹೀಗೇ ದಿನಕ್ಕೆ 3-4 ಬಾರಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.ಹಾಗೂ ಹಲ್ಲು ಹುಳುಕಾಗುದನ್ನು ಕಡುಮೆ ಮಾಡುತ್ತದೆ.ಉಪ್ಪಿನಿಂದ ಬ್ಯಾಕ್ಟೀರಿಯಗಳು ಕೂಡಾ ಶಮನವಾಗುತ್ತದೆ.
ಲವಂಗ
ಲವಂಗದಲ್ಲಿ ಔಷದಿ ಗುಣಗಳಿರುತ್ತದೆ .ಹಾಗೂ ಯುಜೆನಾಲ್ ಎಂಬ ರಾಸಾಯನಿಕ ಅಂಶ ಕೂಡಾ ಇರುತ್ತದೆ..ಆಂಟಿಬ್ಯಾಕ್ಟೀರಿಯಲ್ ಅಂಶ ಇರೊದ್ರಿಂದ ತಕ್ಷಣಕ್ಕೆ ನೋವನ್ನು ಕಡಿಮೆ ಕಡಿಮೆ ಮಾಡುತ್ತದೆ.ಹಲ್ಲು ನೋವಾದಾಗ ಲವಂಗದ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ,ಒಂದು ಹತ್ತಿ ಉಂಡೆಯನ್ನ ಆ ಎಣ್ಣೆಯಲ್ಲಿ ನೆನೆಸಿ ನಂತ್ರ ನೋವಾದ ಹಲ್ಲಿಗೆ ಆ ಹತ್ತಿ ಉಂಡೆಯನ್ನ ಇಡುವುದರಿಂದ ತಟ್ ಅಂತ ನೋವೂ ನಿವಾರಣೆಯಾಗುತ್ತದೆ..ಲವಂಗದ ಎಣ್ಣೆ ಇಲ್ಲದ್ದಿದ್ದಲ್ಲಿ, 1-2 ಲವಂಗವನ್ನ ಬಿಸಿ ಮಾಡಿ ನಂತ್ರ ನೋವಾದ ಜಾಗದಲ್ಲಿ ಇಡುವುದರಿಂದ ನೋವಿನಿಂದ ಮುಕ್ತಿ ಪಡೆಯಬಹುದು.
ಇನ್ನೂ ನೋವು ಹೆಚ್ಚಾದಾಗ ನೀವು ಥೈಮವನ್ನು ಬಳಸಬಹುದು,ಇರುಳ್ಳಿ ಕೂಡಾ ನೋವಿನ ನಿವಾರಣೆ ಮಾಡುತ್ತದೆ,ಹರಳುಪ್ಪು ಕೂಡಾ ಇಡಬಹುದು,ಇವೆಲ್ಲವು ತಕ್ಷಣದ ಪರಿಹಾರ.