ಏಪ್ರಿಲ್ 18ರಂದು ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ (Neha hiremat) ಮನೆಗೆ ಎಡಿಜಿಪಿ (ADGP) ಆರ್. ಹೀತೇಂದ್ರ (R Hitendra) ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಮಾತ್ನಾಡಿದ ಎಡಿಜಿಪಿ, ಕಳೆದ 15 ದಿನಗಳಲ್ಲಿ ಅವಳಿ ನಗರದಲ್ಲಿ ಇಬ್ಬರು ಯುವತಿಯರ ಹತ್ಯೆಯಾಗಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು, ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭೇಟಿ ಕೊಟ್ಟಿದ್ದಾಗಿ ಹೇಳಿದ್ರು.

ಈಗಾಗಲೇ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಚರ್ಚೆ ಮಾಡಲಾಗಿದೆ.ನೇಹಾ ಹತ್ಯೆ ಪ್ರಕರಣವನ್ನು ಸಿಐಡಿ (CID) ತನಿಖೆ ಮಾಡುತ್ತಿದೆ, ಅಂಜಲಿ ಕೇಸ್ ಸಿಐಡಿಗೆ ನೀಡಬೇಕೋ ಬೇಡೋ ಎಂಬುವುದನ್ನು ಗೃಹ ಸಚಿವರು (Home minister) ಹಾಗೂ ಹಿರಿಯ ಅಧಿಕಾರಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಇನ್ನು ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ (Anjali) ಕುಟುಂಬಕ್ಕೆ ಶಾಸಕ ಅರವಿಂದ್ ಬೆಲ್ಲದ್ (Aravind bellad) ಸಾಂತ್ವನ ಹೇಳಿದ್ದಾರೆ. ಬಳಿಕ ಮಾತ್ನಾಡಿದ ಬೆಲ್ಲದ್, ಹುಬ್ಬಳ್ಳಿ (Hubli) ಕರ್ನಾಟಕದ ಎರಡನೇ ರಾಜಧಾನಿ. ಇಲ್ಲಿ ಅಹಿತರ ಘಟನೆ ನಡೆದಿದೆ. ನೇಹಾ ಹತ್ಯೆಗಾರನನ್ನು ಅರೆಸ್ಟ್ ಮಾಡಿದ್ದಾರೆ. ಈಗ ಅಂಜಲಿ ಹತ್ಯೆ ನಡೆದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದರು.