
ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ. ಈ ಜಯದೊಂದಿಗೆ ಫಾಫ್ ಡುಪ್ಲೆಸಿಸ್ ತಂಡವು ಈ ಸೀಸನ್ನಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ.

ಬೆಂಗಳೂರು ನೀಡಿದ 219 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಓಪನರ್ ಆಗಿ ಬಂದ ರುತುರಾಜ್ ಗಾಯಕ್ವಾಡ್ ಡಕೌಟ್ ಆದ್ರು. ರಾಚಿನ್ ರವೀಂದ್ರ ತಾನು ಆಡಿದ 37 ಬಾಲ್ನಲ್ಲಿ 3 ಭರ್ಜರಿ ಸಿಕ್ಸರ್, 5 ಫೋರ್ ಸಮೇತ 61 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ. ರಹಾನೆ 33, ಜಡೇಜಾ 42, ಎಂ.ಎಸ್ ಧೋನಿ 25 ರನ್ ಹೊಡೆದ್ರು. ಚೆನ್ನೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲು ಸಾಧ್ಯವಾಯ್ತು.. ಆರ್ಸಿಬಿ ಚೆನ್ನೈ ವಿರುದ್ಧ 27 ರನ್ನಿಂದ ಗೆದ್ದು ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ.

ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 29 ಬಾಲ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಜತೆಗೆ 3 ಫೋರ್ ಸಿಡಿಸಿದ್ರು. ಬರೋಬ್ಬರಿ 47 ರನ್ ಸಿಡಿಸಿ ಕೇವಲ ಮೂರು ರನ್‌ಗಳಿಂದ ಅರ್ಧಶತಕ ವಂಚಿತರಾದ್ರು. ಸಿಕ್ಸ್ ಹೊಡೆಯಲು ಹೋಗಿ ಔಟಾದ್ರು. ಸ್ಲೋ ಪಿಚ್ ಮಧ್ಯೆಯೂ ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 162ಕ್ಕೂ ಹೆಚ್ಚಿತ್ತು.
ಭರ್ಜರಿ ಬ್ಯಾಟಿಂಗ್ ಮುಂದುವರಿಸುತ್ತಿದ್ದರು. ತಾನು ಎದುರಿಸಿದ 39 ಬಾಲ್ನಲ್ಲಿ 3 ಸಿಕ್ಸರ್, 3 ಫೋರ್ ಸಮೇತ 54 ರನ್ ಚಚ್ಚಿದ್ರು.