ಇಂಡಿಯನ್ ಪ್ರಿಮೀಯರ್ ಲೀಗ್‌ನ (IPL) 68ನೇ ಪಂದ್ಯಕ್ಕೆ ಕ್ಷಣಗಳನೆ ಆರಂಭವಾಗಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಸೆಣಸಾಡುತ್ತಿದೆ. ಪ್ಲೇಆಫ್‌ಗೆ (Playoff) ಅರ್ಹತೆ ಪಡೆಯುವ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿದ್ದು, ಉಭಯ ತಂಡಗಳ ಪೈಕಿ ಯಾರ್ ಗೆಲ್ತಾರೆ ಎಂಬ ನಿರೀಕ್ಷೆ ಗರಿಗೆದರಿದೆ.
ಐಪಿಎಲ್ ಲೋಕದ ಬದ್ಧ ವೈರಿಗಳಾದ ಆರ್‌ಸಿಬಿ vs ಸಿಎಸ್ ಹೈ ವೋಲ್ವೇಜ್ ಮ್ಯಾಚ್ ಗೆ (High voltage match) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinna swamy stadium) ನಡೆಯುತ್ತಿದೆ. ಮ್ಯಾಚ್ ವೇಳೆ ಮೇಘರಾಜನ ಎಂಟ್ರಿ ಆಗದಂತೆ ಆರ್‌ಸಿಬಿ ಅಭಿಮಾನಿಗಳು ದೇವಾಲಯಗಳಲ್ಲಿ ಹೋಮ ಹವನ ನಡೆಯುತ್ತಿದೆ.
ಚೆನೈ ವಿರುದ್ಧ RCB ಟೀಂ ದಾಖಲೆ ಗೆಲುವು ಸಾಧಿಸಿ ಪ್ಲೇ ಆಫ್ ಗೆ ಏರುವಂತೆ ಆದಿ ಶಕ್ತಿ ದೇವಾಲಯದ ಕಾರ್ಪೋರೇಶನ್ ಸರ್ಕಲ್ ಬಳಿ ಅಭಿಮಾನಿಗಳು ಇಡುಗಾಯಿ ಹೊಡೆಯುವ ಮೂಲಕ ಆರ್‌ಸಿಬಿ ಗೆಲುವಿಗಾಗಿ ವಿಶೇಷ ಪೂಜೆ ಮಾಡಿದರು.