ಮುಖದಲ್ಲಿ ಚಿಕ್ಕ ಕಲೆಯಾದ್ರೂ ಕೂಡ ತುಂಬಾನೇ ತಲೆ ಕೆಡಿಸ್ಕೊಳ್ತಿವಿ.ಅಂತದ್ರಲ್ಲಿ ಸಾಕಷ್ಟು ಜನಕ್ಕೆ ಪಿಗ್ಮೆಂಟೇಷನ್ ಸಮಸ್ಯೆ ಕಾಡ್ತಾ ಇದೆ. ಪಿಗ್ಮೆಂಟೇಶನ್ (Pigmentation) ಬಂದಾಗ ಚರ್ಮದ ಬಣ್ಣವೂ ಕಪ್ಪಾಗಿ ಬದಲಾಗುತ್ತೆ. ಇದರ ಜೊತೆಗೆ ಕೆಲವೊಂದು ಕಡೆ ತ್ವಚೆಯ ಬಣ್ಣ ನಾರ್ಮಲ್ ಇದ್ರೆ ಇನ್ನು ಕೆಲವೊಂದು ಕಡೆ ಕಪ್ಪಾಗಿ ಗಾಢವಾಗಿ ಕಾಣಿಸುತ್ತದೆ . ಈ ಕಲೆ ಇದು ಮುಖದ ಅಂದವನ್ನು ಮಂದಗೊಳಿಸುತ್ತದೆ.
ಹಿಂದೆಲ್ಲಾ ಪಿಗ್ಮೆಂಟೇಶನ್ ಶುರು ಆಗ್ತಾ ಇದ್ದಿದ್ದೆ ಒಂದು ಏಜ್ ಕಳೆದ ಮೇಲೆ.ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಲ್ಲೂ ಕೂಡ ಪಿಗ್ಮೆಂಟೇಷನ್ ಆಗ್ತಾ ಇದೆ. ಪಿಗ್ಮೆಂಟೇಷನ್ ಗೆ ಕಾರಣ ನಮ್ಮ ದೇಹದಲ್ಲಿ ಆಗುವಂತಹ ಹಾರ್ಮೋನ್ ಇಂಬಾಲೆನ್ಸ್ (Hormonal Imbalance) ಇರಬಹುದು ಇದರ ಜೊತೆಗೆ ಕೆಲವೊಬ್ಬ ಮಹಿಳೆಯರಿಗೆ ಪ್ರೆಗ್ನೆನ್ಸಿ ಟೈಮಲ್ಲಿ ಪಿಗ್ಮೆಂಟೇಷನ್ ಶುರುವಾಗ್ತಾ ಹೋಗುತ್ತೆ.ಹಾಗೂ ಮುಖ್ಯವಾಗಿ ಬಿಸಿಲಲ್ಲಿ ಕೆಲಸ ಮಾಡೋದ್ರಿಂದ ಅಥವಾ ಬಿಸಿಲಲ್ಲಿ ಓಡಾಡೋದ್ರಿಂದ ಸೂರ್ಯನಿಗೆ ಎಕ್ಸ್ಪೋಸ್ ಆದಾಗ ಮುಖದಲ್ಲಿ ಪಿಗ್ಮೆಂಟೇಶನ್ ಆಗುವಂತ ಸಮಸ್ಯೆ ಶುರುವಾಗ್ತಾ ಹೋಗುತ್ತೆ. ನಮ್ಮ ದೇಹದಲ್ಲಿ ಪ್ರೊಡ್ಯೂಸ್ ಆಗುವಂತಹ ಮೆಲನಿನ್ ಅಂಶ ಸೂರ್ಯನ ಯುವಿ ರೇಸ್(UV Rays) ಇಂದ ತನ್ನನ್ನು ತಾನು ಡಿಫೆಂಡ್ ಮಾಡಿಕೊಳ್ಳುವುದಕ್ಕೆ ಹೆಚ್ಚು ಮೇಲಿನ ನನ್ನ ಉತ್ಪಾದಿಸುತ್ತದೆ ಇದು ಸೂರ್ಯನ ಕಿರಣಗಳಿಂದ ರಕ್ಷಿಸಲು ನಮ್ಮ ಚರ್ಮವನ್ನು ವರ್ಣದ್ರವ್ಯವನ್ನಾಗಿ ಮಾಡುತ್ತದೆ.
ಈ ಪಿಗ್ಮೆಂಟೇಶನ್ ಹೋಗಿಸಲು ಸಾಕಷ್ಟು ಪ್ರಯತ್ನವನ್ನ ಮಾಡಿರ್ತೀರಾ ಆದ್ರೂ ಕೂಡ ನಿಮಗೆ ಗುಡ್ ರಿಸಲ್ಟ್ ಸಿಕ್ಕಿಲ್ಲ ಅಂತ ಆದ್ರೆ ಈ ಒಂದು ರೆಮಿಡೀಸ್ ನ ಟ್ರೈ ಮಾಡಿ ಪಿಗ್ಮೆಂಟೇಶನ್ ಗೆ ಬಾಯ್ ಬಾಯ್ ಹೇಳಿ
ಗಂಧ
ಮುಖದ ಹೊಳೆಪನ್ನ ಹೆಚ್ಚಿಸಲು ಹಾಗೂ ಮುಖದಲ್ಲಿ ಇರುವಂತಹ ಕಪ್ಪು ಕಲೆಗಳನ್ನ ಹೋಗಲಾಡಿಸಲು ಗಂಧ (Sandal) ತುಂಬಾನೇ ಒಳ್ಳೆಯದು. ಗಂಧ ಸುವಾಸನೆಯ ಜೊತೆಗೆ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ.ಹಿಂದೆಲ್ಲ ದೇಹದ ರಕ್ತವನ್ನು ಪ್ಯೂರಿಫೈ ಮಾಡುವುದಕ್ಕೆ ಗಂಧವನ್ನ ಬಳಸ್ತಾ ಇದ್ರು. ಇದರ ಜೊತೆಗೆ ನಮ್ಮ ಸ್ಕಿನ್ ಗೆ ತುಂಬಾನೆ ಒಳ್ಳೆಯದು ಸೂರ್ಯನ ಕಿರಣ(Sun Rays) ಬಂದ ಕಲೆಗಳನ್ನ ತಕ್ಷಣಕ್ಕೆ ಹೋಗಲಾಡಿಸುತ್ತದೆ. ಒಂದು ಟೇಬಲ್ ಸ್ಪೂನ್ ಅಷ್ಟು ಗಂಧ ಅದಕ್ಕೆ ಬೇಕಾದಷ್ಟು ರೋಜ್ ವಾಟರ್ (Rose Water) ಅನ್ನ ಚೆನ್ನಾಗಿ ಮಿಶ್ರಣ ಮಾಡಿ ಪಿಗ್ಮೆಂಟೇಷನ್ ಆದ ಜಾಗಕ್ಕೆ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡುವುದರಿಂದ ತಕ್ಷಣಕ್ಕೆ ನೀವು ಒಳ್ಳೆಯ ರಿಸಲ್ಟ್ ಅನ್ನ ಪಡೆದುಕೊಳ್ಳುತ್ತೀರಾ.
ಯೋಗರ್ಟ್
ಯೋಗಟ್ ನಲ್ಲಿ (yogurt) ಹೆಚ್ಚು ಪ್ರೊಬಯಟಿಕ್ ಅಂಶವಿರುತ್ತದೆ. ಇದು ಪಿಗ್ಮೆಂಟೇಷನ್ ಇಂದ ಆಗಿರುವ ರೆಡ್ನೆಸ್ ಹೋಗಿಸುವುದಕ್ಕೆ ಸಹಾಯ ಮಾಡುತ್ತದೆ .ಹಾಗೂ ಯೋಗರ್ಟ್ ನಲ್ಲಿ ಲಾಟಿಕ್ ಆಸಿಡ್ ಹೆಚ್ಚಿರುವುದರಿಂದ ನಮ್ಮ ಮುಖದಲ್ಲಿ ಇರುವಂತಹ ಕಪ್ಪು ಕಲೆಗಳನ್ನ ನಿವಾರಣೆ ಜೊತೆಗೆ ನಮ್ಮ ಚರ್ಮವನ್ನು ಹೊಳಪು ಮಾಡುತ್ತದೆ. ಒಂದು ಟೇಬಲ್ ಸ್ಪೂನ್ ನಷ್ಟು ಯೋಗರ್ಟ್ ಗೆ ಚಿಟಿಕೆಯಷ್ಟು ಅರಿಶಿಣವನ್ನ ಬೆರೆಸಿ ಪ್ರತಿದಿನ ಪಿಗ್ಮೆಂಟೇಶನ್ ಆದ ಜಾಗಕ್ಕೆ ಹಚ್ಚುವುದರಿಂದ ಬೇಗನೆ ಕಡಿಮೆಯಾಗುತ್ತದೆ.
ಗ್ರೀನ್ ಟೀ
ಗ್ರೀನ್ ಟೀಯಲ್ಲಿ (Green Tea) ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಇನ್ಫ್ಲಮೇಟರಿ ಅಂಶ ಹೆಚ್ಚಿರುತ್ತದೆ. ಇದು ನಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ .ಜೊತೆಗೆ ಯಾವುದೇ ಕಲೆಗಳಿದ್ರೂ ಕೂಡ ಅದನ್ನ ಫೇಡ್ ಮಾಡೋದಕ್ಕೆ ತುಂಬಾನೇ ಸಹಕಾರಿ .ಇದೋಂದು ಒಳ್ಳೆಯ ನ್ಯಾಚುರಲ್ ರೆಮಿಡಿಯಾಗಿದ್ದು ,ಪಿಗ್ಮೆಂಟೇಶನ್ ಸಮಸ್ಯೆ ಇದ್ದವರು ಪ್ರತಿದಿನ ಗ್ರೀನ್ ಟೀಯನ್ನು ಬಳಸುವುದರಿಂದ ನಿಮಗೆ ತಕ್ಷಣಕ್ಕೆ ರಿಸಲ್ಟ್ ಸಿಗುತ್ತದೆ.
ಒಟ್ಟಿನಲ್ಲಿ ಪಿಗ್ಮೆಂಟೇಷನ್ ಶುರುವಲ್ಲಿಯೇ ಅದನ್ನ ನಿವಾರಣೆ ಮಾಡುವುದಕ್ಕೆ ಮುಂದಾಗಿ ಇಲ್ಲವಾದರೆ ನಿಮ್ಮ ಮುಖದ ತುಂಬಾ ಪಿಗ್ಮೆಂಟೇಶನ್ ಆಗುವಂತ ಚಾನ್ಸಸ್ ಹೆಚ್ಚಿರುತ್ತೆ ನಿಮ್ಮ ತ್ವಜೆಯ ಬಗ್ಗೆ ನೀವೇ ಕಾಳಜಿ ವಹಿಸಿ.