ಹೆಚ್ಚು ಜನಕ್ಕೆ ಟೀ ಹಾಗೂ ಕಾಫಿಯನ್ನು ಕುಡಿಯುವಂತಹ ಅಭ್ಯಾಸವಿರುತ್ತದೆ.ಬೆಳಗ್ಗೆ ಎದ್ದಾಗ ಹಾಗೂ ಸಂಜೆ ಸಮಯ ದಿನಕ್ಕೆ ಎರಡು ಬಾರಿ ಟೀ ಕುಡಿಯುವುದು ಉತ್ತಮ. ಆದರೆ ಕೆಲವರು ತಿಂಡಿ ತಿಂದ ನಂತರ ಮಧ್ಯಾಹ್ನ ಊಟದ ನಂತರ ಹೀಗೆ ಟೀ/ಕಾಫಿ ಕುಡಿಯಲು ಸಮಯವನ್ನು /ಕಾರಣ ಹುಡುಕುತ್ತಾನೆ ಇರುತ್ತಾರೆ .ಪದೇ ಪದೇ ಟೀ/ಕಾಫಿ ಯನ್ನ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ, ಅದರಲ್ಲೂ ಕೆಲವರು ಮಧ್ಯಾಹ್ನದ ಊಟದ ನಂತರವೂ ಚಹ ಕುಡಿತಾರೆ..ಅದು ಆ ಸಮಯಕ್ಕೆ ನಿಮ್ಮ ಬಾಯಿಗೆ ರುಚಿ ನೀಡುತ್ತದೆ.ಆದ್ರೆ ನಿಮ್ಮ ಆಗೋಗ್ಯಕ್ಕೆ ಹಾನಿಕಾರ.
ಕಬ್ಬಿಣಾಂಶದ ಕೊರತೆ
ಊಟ ದ ತಕ್ಷಣ ಟೀ ಕುಡಿಯುವುದನ್ನು ಅವಾಯ್ಡ್ ಮಾಡಿ..ಕಾರಣ ಟ್ಯಾನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇದನ್ನು ಸೇವಿಸಿದಾಗ, ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸಬಹುದು.ಇದರಿಂದ ನಮ್ಮ ದೇಹಕ್ಕೆ ಸಿಗಬೇಕಾದಂತಹ ಐರನ್ ಕಂಟೆಂಟ್ ಸಿಗುವುದಿಲ್ಲ..
ಜೀರ್ಣಕ್ರಿಯೆಗೆ ತೊಂದರೆ
ಕಾಫಿ ಅಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ.ಇದು ನಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಸಿಡ್ ನ ಪ್ರೊಡ್ಯೂಸ್ ಮಾಡುತ್ತದೆ..ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಎದೆ ಉರಿ ಹೆಚ್ಚಾಗುತ್ತದೆ ಮತ್ತು ಊಟ ತಿಂಡಿ ಸರಿಯಾಗಿ ಸೇರುವುದಿಲ್ಲ..
ನಿದ್ದೆ ಕೊರತೆ
ಆಫಿಸ್ ಹೋಗುವವರು ನಿದ್ದೆಯನ್ನ ತಪ್ಪಿಸಲು ಟೀ/ಕಾಫಿನ ಕುಡಿಯುತ್ತಾರೆ..ಇದರಲ್ಲಿ ಕೆಫಿನ್ ಅಂಶ ಇರುವುದರಿಂದ ನಿದ್ದೆಯನ್ನು ತಡೆಗಟ್ಟುತ್ತದೆ..ಆದ್ರೆ ಸಂಜೆ ವೇಳೆ ಟೀ ಕುಡಿಯುದರಿಂದ ರಾತ್ರಿ ಹೊತ್ತು ನಿದ್ದೆ ಸರಿಯಾಗಿ ಆಗುವುದಿಲ್ಲ..ನಿದ್ದೆ ಕೊರತೆ ಆಗುತ್ತದೆ.ಹಾಗೂ ಮರುದಿನ ಆಕ್ಟಿವ್ ಆಗಿ ಇರೋದಕ್ಕೆ ಆಗೋದಿಲ್ಲ..ನಿದ್ದೆ ಕೊರತೆ ಇಂದಾಗಿ ಸಾಕಷ್ಟು ಸಮಸ್ಯೆಗಳು ಶುರುವಾಗುತ್ತದೆ.
ನ್ಯೂಟ್ರಿಷನ್ ಕೊರತೆ
ಕಾಫಿ ಟೀ ಅಲ್ಲಿ ಇರುವ ಕೆಲವು ಅಂಶಗಳು ನಮ್ಮ ದೇಹದಲ್ಲಿರುವ ಕ್ಯಾಲ್ಸಿಯಂ ,ಜಿಂಕ್ ,ಮಿನರಲ್ಸ್ ನ ಹೀರಿಕೊಳ್ಳುತ್ತದೆ.ಇದರಿಂದ ಚರ್ಮದ ಸಮಸ್ಯೆ ,ಕೂದಲು ಉದುರುವಿಕೆ ಹೀಗೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಾದೇ.
ಒಟ್ಟಿನಲ್ಲಿ ಅತಿಯಾದರೆ ಅಮೃತನು ವಿಷವಾಗುತ್ತದೆ ಅನ್ನುವ ಗಾದೆ ಮಾತನ್ನು ಕೇಳಿರ್ತಿರಾ..ಹಾಗಾಗಿ ಎಲ್ಲದಕ್ಕೂ ಕೂಡ ಲಿಮಿಟ್ ಇರಬೇಕು..ನಿಮ್ಮ ಆರೋಗ್ಯದ ಬಗ್ಗೆ ನೀವೆ ಕಾಳಜಿ ವಹಿಸಿ.