ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ಕೈ ತಪ್ಪಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಡಾ.ಎಸ್.ಆರ್ ಹರೀಶ್ (Dr.S.R.Harish) ಆಚಾರ್ಯ ನಿರ್ಧಾರ ಮಾಡಿದ್ದಾರೆ. ಎಬಿವಿಪಿ (ABVP), ಸಹಕಾರ ಭಾರತಿಯಲ್ಲಿ ಹರೀಶ್ ಆಚಾರ್ಯ (Harish aharya) ಗುರುತಿಸಿಕೊಂಡಿದ್ದಾರೆ.
ಸದ್ಯ ಹರೀಶ್ ಆಚಾರ್ಯ ನಿರ್ಧಾರದಿಂದ ಮಂಗಳೂರಿನ ನೈರುತ್ಯ ಶಿಕ್ಷಕ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿಗೆ ಬಂಡಾಯದ ಬಿಸಿ ಎದುರಾಗಿದೆ. ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡಬೇಕೆಂದು ಐದಾರು ತಿಂಗಳಿನಿಂದ ನಿರಂತರವಾಗಿ ಕೆಲಸ ಮಾಡಿದ್ದೇನೆ, ಈಗ ಟಿಕೆಟ್ ಕೈ ತಪ್ಪಿರೋದು ಬೇಸರ ತಂದಿದೆ 20.
ನಾನು ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿದ್ದೆ. ಶಿಕ್ಷಕ ಮತ್ತು ಪದವೀಧರ ಕ್ಷೇತ್ರಕ್ಕೆ ಕರಾವಳಿಯಲ್ಲಿ ಅರ್ಹವಾದ ಸಾಕಷ್ಟು ಜನ ಇದ್ರು. ಆದ್ರೆ ಅಂತವರನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ನಾನು ಸ್ಪರ್ಧೆ ಮಾಡ್ತಿದ್ದೇನೆ ಅಂತ ತಿಳಿಸಿದ್ದಾರೆ.