ಲೋಕಸಭಾ ಚುನಾವಣೆ (Parliment election) ಆದ ನಂತರ ಮಹಾರಾಷ್ಟ್ರದಲ್ಲಿ (maharshtra) ಬಿಜೆಪಿ (BJP) ಮೈತ್ರಿ ಸರ್ಕಾರ ಇರುವುದೇ ಅನುಮಾನ. ಅಲ್ಲಿ ಮತ್ತೊಮ್ಮೆ ಕಾಂಗ್ರೆಸ್ (Congress) ಮೈತ್ರಿ ಸರ್ಕಾರ ರಚನೆಯಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ (Modi) ಅವರು ಉದ್ದವ್ ಠಾಕ್ರೆ (uddav thaakre) ಬಗ್ಗೆ ಏಕೆ ಮಾತನಾಡಿದರು. ಅವರಿಗೆ ಶಕ್ತಿ ಇದೆ ಎನ್ನುವ ಕಾರಣಕ್ಕೆ. ಚುನಾವಣೆ ನಂತರ ಎನ್ ಸಿಪಿ (NCP) ಮತ್ತು ಶಿವಸೇನೆ (Shiva sene) ಬಿಟ್ಟು ಹೋದವರು ಮರಳಿ ಬರುತ್ತಾರೆ. ಈ ಕಾರಣಕ್ಕೆ ಅವರು ಹೆದರಿದ್ದಾರೆ ಎಂದು ತಿರುಗೇಟು ನೀಡಿದರು.
ಕರ್ನಾಟಕದಲ್ಲಿ (Karnataka) ಶಿಂಧೆ ತರದವರು ಇದ್ದಾರೆಯೇ ಎಂದು ಕೇಳಿದಾಗ, ಅವರಲ್ಲಿ ಆ ತರದವರು ಇರಬಹುದು. ನಮ್ಮಲ್ಲಿ ಇಲ್ಲ. ನಮಗೆ ಯಾರ ಭಯವೂ ಇಲ್ಲ. ಅವರ ಸರ್ಕಾರ ಬೀಳುತ್ತದೆ, ಪಕ್ಷ ಬಿಟ್ಟು ಬಂದವರು ಮರಳಿ ಹೋಗುತ್ತಾರೆ ಎನ್ನುವ ಭಯದಿಂದ ಹೀಗೆ ಹೇಳುತ್ತಿದ್ದಾರೆ ಎಂದರು.