ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ (prajwal revanna) ಮೇ 15ಕ್ಕೆ ದೇಶಕ್ಕೆ ಮರಳಬಹುದು, ರಿಟನ್ ಟಿಕೆಟ್ (Retum ticket) ಬುಕ್ ಆಗಿದೆ ಎಂಬ ಮಾಹಿತಿ ಹರಿದಾಡ್ತಿತ್ತು. ಆದ್ರೆ ಈಗ ಆ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗ್ತಿದೆ. ರಾಜ್ಯದಲ್ಲಿ ಚುನಾವಣೆ ಮುಗಿದ ಬಳಿಕ ಪ್ರಜ್ವಲ್ ರೇವಣ್ಣ ಆಗಮಿಸಬಹುದು ಎನ್ನಲಾಗಿತ್ತು. ಆದ್ರೆ ಫಲಿತಾಂಶ ಬರುವವರೆಗೂ ಪ್ರಜ್ವಲ್ ದೇಶಕ್ಕೆ ಮರಳೋದು ಡೌಟ್.
ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ದೇಶದಿಂದ ಕಾಲ್ಕಿತ್ತಿರೋ ಪ್ರಜ್ವಲ್ ರೇವಣ್ಣ ಚುನಾವಣಾ ಫಲಿತಾಂಶದ (Election results) ಬಳಿಕವೇ ವಿದೇಶದಿಂದ ವಾಪಸ್ ಸಾಗುವ ಸಾಧ್ಯತೆ ಎನ್ನಲಾಗ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ಹಿಂದಿರುಗಿದರೆ ತಕ್ಷಣ ಬಂಧನದ ಜೊತೆಗೆ ವಿಚಾರಣೆ ಎದುರಿಸಬೇಕಾಗುತ್ತೆ. ಪ್ರಜ್ವಲ್ ರೇವಣ್ಣ ಬಂಧನವಾದರೆ (prajwal revanna arrest) ಆರೋಪಗಳ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗುವ ಆತಂಕ ಉಂಟಾಗಿದೆ ಎನ್ನಲಾಗ್ತಿದೆ.
ಇನ್ನು ವಿದೇಶದಲ್ಲಿದ್ದುಕೊಂಡೇ ಕಾನೂನಾತ್ಮಕ ರಕ್ಷಣೆಗಳ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದಾರೆ.ತಂದೆ ಜೈಲಿನಲ್ಲಿರುವಾಗಲೇ ತಾವೂ ಜೈಲು (jaii) ಸೇರಿದ್ರೆ ಹೆಚ್ಚಿನ ಸಂಕಷ್ಟ ಎನ್ನುವ ಭೀತಿ ಉಂಟಾಗಿದೆ. ಹಾಗಾಗಿಯೇ ಕೆಲ ದಿನ ಕಾದು ನೋಡೋ ನಿರ್ಧಾರದಲ್ಲಿದ್ದಾರೆ ಅಂತ ಹೇಳಲಾಗ್ತಿದೆ.