ಬೆಂಗಳೂರಲ್ಲಿ ಗುರುವಾರ ಸಂಜೆ ಶುರುವಾದ ಮಳೆ ನಿನ್ನೆ ರಾತ್ರಿ ಕೂಡ ಮುಂದುವರಿದಿತ್ತು. ಧಾರಾಕಾರ ಮಳೆ ಆಗಿದ್ದು, ನಿನ್ನೆ ಸುರಿದ ಮಳೆಗೆ ನಗರದ ಹಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿನ್ನೆ ಮಳೆ ಸುರಿದ ಗಾಳಿ ಮಳೆಗೆ 70ಕ್ಕೂ ಹೆಚ್ಚು ಮರಗಳು ಧರಾಶಾಹಿ ಆಗಿವೆ. 180ಕ್ಕೂ ಹೆಚ್ಚು ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ.
ದಕ್ಷಿಣ ವಲಯದಲ್ಲಿ 10 ಮರಗಳು, RR ನಗರ ವಲಯದಲ್ಲಿ 32, ಬೊಮ್ಮನಹಳ್ಳಿ ವಲಯ 06, ಪಶ್ಚಿಮ ವಲಯ 10, ಮಹಾದೇವಪುರ 01, ಯಲಹಂಕ 03, ಪೂರ್ವ ವಲಯ 06, ದಾಸರಹಳ್ಳಿ ವಲಯ 02 ಹೀಗೆ ಸುಮಾರು 70ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ.
ಮರಗಳನ್ನು ಬೇಸಿಗೆ ಕಾಲದಲ್ಲೇ ಬಿಬಿಎಂಪಿ ಅಧಿಕಾರಿಗಳು ಪರಿಶೀಲಿಸಬೇಕು. ಒಣ ಮರಗಳು ಹಾಗು ಒಣಗಿರುವ ರೆಂಬೆ ಕೊಂಬೆಗಳನ್ನು ತೆರವು ಮಾಡಬೇಕು. ಇನ್ನುಳಿದಂತೆ ಮಳೆಗಾಳಿಗೆ ಬೀಳುವ ಮರಗಳು ಹಾಗು ರೆಂಬೆಗಳು ಇದ್ದರೆ ಎಚ್ಚರ ವಹಿಸಿ ಕತ್ತರಿಸಬೇಕು. ಇದಾವುದನ್ನೂ ಬಿಬಿಎಂಪಿ ಮಾಡಿಲ್ಲ. ಹೀಗಾಗಿ ಮಳೆಗಾಲ ಆರಂಭ ಆಗ್ತಿದ್ದ ಹಾಗೆ ಮರಗಳು ಧರೆಗೆ ಉರುಳುತ್ತಿವೆ.
ಬೈಕ್ ಸವಾರರು ಹಾಗು ಕಾರು ಪ್ರಯಾಣಿಕರ ಮೇಲೆ ಮರಗಳು ಬಿದ್ದಿರುವ ಘಟನೆಗಳೂ ನಡೆದಿವೆ. ಈಗಾಗಲೇ ಬೆನ್ನು ಮೂಳೆ ಮುರಿದುಕೊಂಡ ಐಟಿ ಉದ್ಯೋಗಿಯೊಬ್ಬ ಮಣಿಪಾಲ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.