ಬೆಂಗಳೂರು :- ಮಹಿಳೆಯ ಕಿಡ್ನಾಪ್ ಪ್ರಕರಣದ ಆರೋಪದಡಿಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಈವರೆಗೂ ಕುಟುಂಬಸ್ಥರು ಬಂದು ಭೇಟಿಯಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಕಳೆದ ನಾಲ್ಕು ದಿನಗಳಿಂದ ಎಸ್‌ಐಟಿ ಅಧಿಕಾರಿಗಳ ವಶ, ಬಳಿಕ ಬಂಧನವಾಗಿ ಸದ್ಯ ಪರಪ್ಪನ ಅಗ್ರಹಾರದ ಜೈಲು ಸೇರಿರುವ ಹೆಚ್.ಡಿ.ರೇವಣ್ಣರನ್ನು ಕುಟುಂಬದ ಯಾವುದೇ ವ್ಯಕ್ತಿಗಳು ಬಂದು ಭೇಟಿಯಾಗಿಲ್ಲ. ಇನ್ನು ಸೋಮವಾರ ಮತ್ತೊಮ್ಮೆ ಕೋರ್ಟ್ ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಿರುವ ರೇವಣ್ಣರಿಗೆ ಅಂದು ಗುಡ್‌ನ್ಯೂಸ್ ಸಿಗಲಿದೆಯಾ ಕಾದು ನೋಡಬೇಕಿದೆ.












