
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಅಂತಾನೆ ಕರೆಸಿಕೊಳ್ಳುವ SSLC ಪರೀಕ್ಷೆಯ ರಿಸಲ್ಟ್ ಗೆ ಕ್ಷಣಗಣನೆ ಆರಂಭವಾಗಿದೆ. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಶ್ರಮದ ಫಲಿತಾಂಶ ಇಂದು ಹೊರಬೀಳಲಿದೆ. ಕೆಎಸ್‌ಇಎಬಿ ವಿದ್ಯಾರ್ಥಿಗಳ ಫಲಿತಾಂಶವನ್ನು ಮೇ 09 ಗುರುವಾರ ಬೆಳಿಗ್ಗೆ 10-30 ಗಂಟೆ ನಂತರ ಬಿಡುಗಡೆ ಮಾಡಲಿದೆ. ರಿಸಲ್ಟ್ ಗಾಗಿ ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ.

ತಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ರಿಸಲ್ಟ್ ಯಾವಾಗ ಬರುವುದೋ ಎಂದು ಕಾತುರದಿಂದ ಮುನ್ನೋಡುತ್ತಿದ್ದ ವಿದ್ಯಾರ್ಥಿಗಳ ಕುತೂಹಲಕ್ಕೆ ಇವತ್ತು ತೆರೆಬೀಳಲಿದೆ.
ಮೇ 09, 2024 ರಂದು ಪ್ರಕಟಿಸಲಾಗುವುದು ಎಂದು ಮಂಡಲಿ ಅಧಿಕೃತ ಸುತ್ತೋಲೆ ಮೂಲಕ ತಿಳಿಸಿದೆ. ವಿದ್ಯಾರ್ಥಿಗಳು ನಾಳೆ ಬೆಳಿಗ್ಗೆ 10-30 ಗಂಟೆಯ ನಂತರ ತಮ್ಮ ಫಲಿತಾಂಶವನ್ನು ವೆಬ್ ವಿಳಾಸ https://karresults.nic.in ನಲ್ಲಿ ಚೆಕ್ ಮಾಡಬಹುದಾಗಿದೆ.