ಪ್ರತಿ ವರ್ಷ ತುಂಬಾನೇ ಸದ್ದು ಮಾಡುವ ಅತಿ ದೊಡ್ಡ ಫ್ಯಾಷನ್ ಈವೆಂಟ್ ಮೆಟ್ ಗಾಲ ದಲ್ಲಿ ಹಾಲಿವುಡ್ ನಟಿಯರ ಜೊತೆ ಬಾಲಿವುಡ್ ತಾರೆಯರು ಕೂಡ ರೆಡ್ ಕಾಟ್ಮೆಂಟ್ ಮೇಲೆ ಹೆಜ್ಜೆಯನ್ನು ಹಾಕುತ್ತಾರೆ.. ಹಾಗೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದಂತ ಡಿಸೈನರ್ಸ್ ರೆಡಿ ಮಾಡಿದಂತಹ ವಿಭಿನ್ನ ಉಡುಗೆ ತೊಟ್ಟು ನಮ್ಮ ಸುಂದರಿಯರು ಪ್ರತಿಯೊಬ್ಬರನ್ನ ಅಟ್ರಾಕ್ಟ್ ಮಾಡ್ತಾರೆ..
ಅದರಲ್ಲೂ ಒಬ್ಬರಿಗಿಂತ ಒಬ್ಬರು ವಿಭಿನ್ನ ಹಾಗೂ ವಿಶೇಷ ಬಟ್ಟೆಗಳನ್ನ ಧರಿಸಿ ಸುಂದರವಾಗಿ ಕಾಣುತ್ತಾರೆ. ಈ ಬಾರಿಯ ಮೆಟ್ ಗಾಲಾ ಇವೆಂಟ್ ನಲ್ಲಿ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಭಾರತೀಯ ಸಂಪ್ರದಾಯಿಕ ಉಡುಗೆ ಸೀರೆಯನ್ನು ಉಟ್ಟು ಪ್ರತಿಯೊಬ್ಬರ ಮನಸ್ಸನ್ನ ಸೆಳೆದಿದ್ದಾರೆ..
ಹೌದು ಸೆಲೆಬ್ರಿಟಿ ಡಿಸೈನರ್ ಸಬ್ಯಾಸಾಚಿಯವರು ಡಿಸೈನ್ ಮಾಡಿದಂತಹ ಸೀರೆ ಇದಾಗಿದ್ದು ಲೈಟ್ ಮಿಂಟ್ ಗ್ರೀನ್ ಶೇಡ್ ಕಲರ್ ಆಗಿದ್ದು ಅಲ್ಲಲ್ಲಿ ಗೋಲ್ಡನ್ ಬೀಟ್ಸ್ ಹಾಗೂ ಶೀರ್ ಫ್ಯಾಬ್ರಿಕ್ ನ ಕುಸುರಿ ಹ್ಯಾಂಡ್ ವರ್ಕ್ ನ ಮಾಡಿದ್ದಾರೆ ಜೊತೆಗೆ ರಿಯಲ್ ಹರಳುಗಳನ್ನು ಕೂಡ ಈ ಸೀರೆಯಲ್ಲಿ ಇಟ್ಟಿದ್ದು ಕಂಪ್ಲೀಟ್ ಕಸ್ಟಮೈಡ್ ಸಾರಿ ಇದಾಗಿದೆ..ಇನ್ನು ಸೀರೆ ಪಕ್ಕಾ ಮ್ಯಾಚ್ ಗ್ರಾಂಡ್ ಮೆಗಾ ಸ್ಲೀವ್ ಬ್ಲೌಸ್ ಹಾಗೂ ಹಿಂದೆ ಭೋ ವಿಭಿನ್ನ ಲುಕ್ ನೀಡಿದೆ..
ಮಾತ್ರವಲ್ಲದೆ ಕಾಸ್ಟ್ಯೂಮ್ಗೆ ತಕ್ಕಂತೆ ಮಿಂಟ್ ಗ್ರೀನ್ ಅಂಡ್ ಗೋಲ್ಡ್ ಕಾಂಬಿನೇಷನ್ ನ ಜ್ಯುವೆಲ್ಸ್ ಹಾಗೂ ಸಿಂಪಲ್ ಅಂಡ್ ಅಟ್ರಾಕ್ಟಿವ್ ಮೇಕಪ್ ಜೊತೆಗೆ ಮೆಸ್ ಬನ್ ಹೇರ್ ಸ್ಟೈಲ್ ದೇಶ ವಿದೇಶದ ಡಿಸೈನರ್ಸ್ ನ ಗಮನ ಸೆಳೆದಿದೆ..
ಇನ್ನು ಆಲಿಯಾ ಭಟ್ ಅವರ ಎರಡನೇ ಮೆಟ್ ಗಾಲಾ ಈವೆಂಟ್ ಇದಾಗಿದ್ದು ಪ್ರತಿಯೊಬ್ಬರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ..