ಬೆಂಗಳೂರು: ಪ್ರಜ್ವಲ್ ರೇವಣ್ಣ ಹಾಸನದಿಂದ ಗೆದ್ದರೆ ನಾವು ಎನ್ಡಿಎ (NDA)ದಿಂದ ಅಮಾನತು ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ವಿರುದ್ಧ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ (Siddaramaiah) ಪ್ರಜ್ವಲ್ ಯಂಗ್ ಲೀಡರ್, ವಿಜನ್ ಲೀಡರ್ ಅಂದಿದ್ರು. ಈಗ ಪ್ರಜ್ವಲ್ ಬಗ್ಗೆ ಅವರೇ ಮಾತಾಡಲಿ. ಅವರೇ ಗೆಲ್ಲಿಸಿದ ಸಂಸದ ಪ್ರಜ್ವಲ್. ಅವರು ಟಿಕೆಟ್ ಕೊಟ್ಟಿದ್ದು 5 ವರ್ಷದ ಅವಧಿಗೆ. ಸಿದ್ದರಾಮಯ್ಯ ಹೇಳಿದಂತೆಯೇ ಪ್ರಜ್ವಲ್ ವಿಜನ್ ತೋರಿಸಿದ್ದಾರೆ. ಒಂದು ವೇಳೆ ಪ್ರಜ್ವಲ್ ಗೆದ್ದರೆ ನಾವು ಎನ್ಡಿಎದಿಂದ ಅಮಾನತು ಮಾಡುತ್ತೇವೆ ಎಂದು ಹೇಳಿದ್ದಾರೆ.
ಹೆಚ್.ಡಿ ರೇವಣ್ಣ ಬಂಧನ (HD Revanna Arrest) ಸರಿಯಾಗಿದೆ. ಅವರ ಬಂಧನ ಮಾಡಿದ ಪೊಲೀಸರ ಕಾರ್ಯ ಶ್ಲಾಘಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಕೂಡ ಅವರು ಹೇಳಿದ್ದಾರೆ.