ಹಾಸನ: ಕಾನೂನು ಸಂಘರ್ಷದಲ್ಲಿ ರೇವಣ್ಣ ಕುಟುಂಬ ಸಿಲುಕಿದೆ. ಸದ್ಯ ಎಲ್ಲ ವಿಘ್ನಗಳಿಂದ ಒಳ್ಳೆಯದಾಗಲಿ ಎಂದು ಅವರ ಮನೆ ದೇವರು ಈಶ್ವರನ ಪ್ರಸಾದವನ್ನು ಅರ್ಚಕರು ದೇವರ ಮನೆಗೆ ತಂದಿದ್ದಾರೆ.

ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿನ ದೇವೇಶ್ವರ ದೇವಾಲಯದಿಂದ ಅರ್ಚಕ ಪ್ರಸಾದ ತಂದಿದ್ದಾರೆ. ಅದನ್ನು ಭವಾನಿ ರೇವಣ್ಣ ಅವರಿಗೆ ನೀಡಲು ಅರ್ಚಕರು ಬಂದಿದ್ದರು. ಈ ವೇಳೆ ಪೊಲೀಸರು ಅರ್ಚಕರನ್ನು ತಡೆದು ಪ್ರಶ್ನಿಸಿದ್ದಾರೆ. ಪ್ರಸಾದವಿದ್ದ ಬ್ಯಾಗ್‌ನ್ನು ಪರಿಶೀಲನೆ ನಡೆಸಿದರು. ಬ್ಯಾಗ್‌ನಲ್ಲಿ ಪ್ರಸಾದ ಇರುವುದನ್ನು ಕಂಡು ಒಳಗಡೆ ಬಿಟ್ಟಿದ್ದಾರೆ. ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಎದುರಿಸುತ್ತಿದ್ದಾರೆ. ಈಗಾಗಲೇ ಒಂದು ಪ್ರಕರಣದಲ್ಲಿ ಬಂಧನ ಭೀತಿಯಿಂದ ಪಾರಾಗಿದ್ದರು. ಈಗ ಎರಡನೇ ಪ್ರಕರಣ ದಾಖಲಾಗಿದ್ದು, ರೇವಣ್ಣಗೆ ಬಂಧನ ಭೀತಿ ಶುರುವಾಗಿದೆ.