ಬೆಂಗಳೂರು :- ಇದೊಂದು ನಾಚಿಕೆಗೇಡಿನ ಸಂಗತಿ. ಪ್ರಜ್ವಲ್ ರೇವಣ್ಣರ ಪ್ರಕರಣ ಇಡೀ ರಾಜ್ಯವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಗೂಗಲ್ನಲ್ಲಿ P ಅಂತಾ ಟೈಪ್ ಮಾಡಿದ್ರೆ, ಪ್ರಜ್ವಲ್ ರೇವಣ್ಣ ಅಂತಾ ಬರುತ್ತೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಎಲ್.ಆರಚ.ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಇದೊಂದು ನಾಚಿಕೆಗೇಡು. ಗೂಗಲ್ ಕೂಡ P ಅಂತಾ ಟೈಪ್ ಮಾಡಿದ್ರೆ, ಪ್ರಜ್ವಲ್ ರೇವಣ್ಣ ಅಂತಾ ತೋರಿಸುತ್ತೆ ಅಂದರೆ ಲೆಕ್ಕ ಹಾಕಿ ಎಂದು, ಪ್ರಜ್ವಲ್ ರೇವಣ್ಣರ ವಿರುದ್ಧ ಕಿಡಿಕಾರಿದ್ದಾರೆ.
