ಬೆಂಗಳೂರು :- ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಲುಕ್‌ಔಟ್ ನೋಟಿಸ್‌ನ್ನು ಎಸ್‌ಐಟಿ ಅಧಿಕಾರಿಗಳು ಜಾರಿಗೊಳಿಸಿದ್ದಾರೆ. ಮಹಿಳೆಯೊಬ್ಬರು ಹೊಳೆನರಸೀಪುರದಿಂದ ಕಿಡ್ನ್ಯಾಪ್ ಮಾಡಿರುವ ಆರೋಪದಲ್ಲಿ ಎರಡನೇ ಆರೋಪಿಯಾಗಿರುವ ಹೆಚ್.ಡಿ.ರೇವಣ್ಣ ವಿದೇಶಕ್ಕೆ ಹಾರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಪ್ರಜ್ವಲ್ ರೇವಣ್ಣರ ಮಾದರಿಯಲ್ಲಿಯೇ ಹೆಚ್.ಡಿ. ರೇವಣ್ಣ ಕೂಡ ವಿದೇಶಕ್ಕೆ ಹೋಗಬಹುದು. ಅಲ್ಲಿ ತಲೆ ಮರೆಸಿಕೊಳ್ಳಬಹುದು ಎಂಬ ಮುನ್ಸೂಚನೆ ಮೇರೆಗೆ, ಹೆಚ್.ಡಿ. ರೇವಣ್ಣರ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.
