ಐದು ವರ್ಷ ರಾಜ್ಯ ಕಾಂಗ್ರೇಸ್ (congress) ಸರ್ಕಾರ ಅಧಿಕಾರದಲ್ಲಿ ಇರಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD kumaraswamy) ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಎನ್ನಿಸುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಜೇವರ್ಗಿ (jevargi) ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನೇನೂ ಭವಿಷ್ಯ ಹೇಳುವವನಲ್ಲ, ಆದ್ರೆ ಈಗ ನಡೆಯುತ್ತಿರುವ ಬೆಳವಣಿಗಳನ್ನ ಗಮನಿಸಿ ಹೇಳ್ತಿದ್ದೇನೆ. ಬಹುಶಃ ಈ ವರ್ಷದಲ್ಲಿ ಚುನಾವಣೆ ಬಂದ್ರು ಅಚ್ಚರಿ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತೇ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಜ್ವಲ್ ರೇವಣ್ಣ (prajwal revanna) ಮತ್ತು ರೇವಣ್ಣ ಲೈಂಗಿಕ ದೌರ್ಜ್ಯನದಿಂದ ತೀವ್ರ ಮುಜುಗರಕ್ಕೊಳಗಾಗಿರುವ ಹೆಚ್.ಡಿ.ಕೆ ಕಾಂಗ್ರೆಸ್ ಸರ್ಕಾರ ಮತ್ತು ಡಿಕೆಶಿ (Dk shivakumar) ವಿರುದ್ಧ ಸಿಡಿದೆದ್ದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾದ್ದು, ಕುಮಾರಸ್ವಾಮಿಯವರ ಈ ಭವಿಷ್ಯವಾಣಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.